menu-iconlogo
huatong
huatong
avatar

Naa Ninna Mareyalare

S. Janaki/Dr. Rajkumarhuatong
naynay12966huatong
Lyrics
Recordings
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

ಆ ಕೆಂಪು ತಾವರೆ ಆ ನೀರಿಗಾದರೆ

ಈ ಹೊನ್ನ ತಾವರೆ ನನ್ನಾಸೆಯಾಸರೆ

ಆ.........

ಆ.........

ಆ.........

ಆ.........

ಮಿಂಚೆಂಬ ಬಳ್ಳಿಗೆ ಮೇಘದ ಆಸರೆ

ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ

ಓ ಓ ಯುಗಗಳೇ ಜಾರಿ ಉರುಳಿದರೇನು

ನಾನೇ ನೀನು ನೀನೆ ನಾನು

ಆದಮೇಲೆ ಬೇರೆ ಏನಿದೆ.....

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ..

ರವಿಯನ್ನು ಕಾಣದೆ ಹಗಲೆಂದು ಆಗದು

ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು

ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ

ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ..

ಓ ಓ ವಿರಹದ ನೋವ ಮರೆಯಲಿ ಜೀವ

ಹೂವು ಗಂಧ ಸೇರಿದಂತೆ

ಪ್ರೇಮದಿಂದ ನಿನ್ನ ಸೇರುವೆ.....

ಎಲ್ಲೆಲ್ಲಿ ನೋಡಲಿ

ನಿನ್ನನ್ನೇ ಕಾಣುವೆ

ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ)

ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ)

ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ)

ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ)

More From S. Janaki/Dr. Rajkumar

See alllogo