* * * * * * * * * * *
(F) : ಲಲಲ ಲಾಲ ಲಾಲ ಲಾಲ
* * * *
(F) : ಎಲ್ಲೆಲ್ಲು ಅಂದ ಆನಂದ ನಿನ್ನಿಂದ
ಎಂದೆಂದು ಚೆಂದ ನೀ ತಂದ ಅನುಬಂಧ
ಬಾಳಲಿ ಅನುದಿನ ಒಲವಿನಾ ಔತಣ
ಎಲ್ಲೆಲ್ಲು ಅಂದ ಆನಂದ ನಿನ್ನಿಂದ
* * * * * * * * * * *
ಚಿತ್ರ : ಅನುರಾಗ ಬಂಧನ ; ಹಾಡು : ಎಲ್ಲೆಲ್ಲು ಅಂದ ಆನಂದ ನಿನ್ನಿಂದ
ಸಾಹಿತ್ಯ : ಗೀತಪ್ರಿಯ ; ಸಂಗೀತ : ರಾಜನ್ ನಾಗೇಂದ್ರ
ಮೂಲ ಗಾಯನ : ಎಸ್. ಜಾನಕೀ & ಎಸ್. ಪಿ. ಬಾಲಸುಬ್ರಮಣ್ಯಂ
ಅಪ್ಲೋಡ್ : ಪ್ರಸನ್ನ ಶರ್ಮ (SM ID: 13289359164)
Track No. 152
* * * * * * * * * * *
(F) : ಓಡಿದೆ ನದಿ ವೇಗದಿ
ಸಾಗಿ ಆವೇಶ ಹೊಂದಿ
ಆಗಿ ಕಡಲಲ್ಲೇ ಬಂಧಿ
* * * *
(M) : ಜಾರುವ ಜಲಧಾರೆಯ
ರಮ್ಯ ಸೌಂದರ್ಯದಲ್ಲಿ
ನೃತ್ಯ ರೋಮಂಚದಲ್ಲಿ
(F) : ಮಧುರಾ ಮಧುರಾ
ನಮ್ಮೀ ಮಿಲನ
ಮಯ್ಯಿ ಝುಮ್ ಎಂದಿದೆ
ರಂಗು ರಂಗಾಗಿದೆ
ಎಲ್ಲೆಲ್ಲು ಅಂದ ಆನಂದ ನಿನ್ನಿಂದ
*
(M) : ಎಂದೆಂದು ಚೆಂದ ನೀ ತಂದ ಅನುಬಂಧ
* * * * * * * *
(M) : ಏ ಹೇ ಹೆ ಹೇ
(F) : ಲಲಲ ಲಲಲ ಲಲಲ ಲಲಲ
(M) : ಆ ಹಾ ಆ ಹಾ
(F) : ಲಾ ಲಾ ಲಲಲ ಲಲಲ ಲಾ ಲಾ
(M) : ಏ ಹೇ
(F) : ಹೆ ಹೇ
* * * *
(M) : ಬಾಳಿನ ಹೊಸ ಪಲ್ಲವಿ
ಜೀವ ಸಂಗೀತದಲ್ಲಿ
ಭಾವ ಸಂತೋಷದಲ್ಲಿ
* * * *
(F) : ಪ್ರೇಮದ ವರದಾನದ
ಮೋಹ ಸಂಬಂಧದಲ್ಲಿ
ನಾನು ನೀನೆಂಬುದೆಲ್ಲಿ?
(M) : ಒಲವು ಚೆಲುವು ನಲಿವು ಗೆಲುವು
ಎಲ್ಲ ನಮದಾಗಿದೆ
ಸ್ನೇಹ ಸಂಯೋಗದೇ
(F) : ಎಲ್ಲೆಲ್ಲು ಅಂದ ಆನಂದ
(M) : ನಿನ್ನಿಂದ
ಎಂದೆಂದು ಚೆಂದ ನೀ ತಂದ
(F) : ಅನುಬಂಧ
(B) : ಬಾಳಲಿ ಅನುದಿನ ಒಲವಿನಾ ಔತಣ
* * * * * * * *
* Thank You All *