ಹೇ.. ಏ.. ಹಾ ಹಾ .. ಆ ಆ
ಆ ಆ ಆ ಹೂಂ ಹ್ಮ್ ಹ್ಮ್
ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಳೆ ತಂದರು
ಹೆಣ್ಣು ಮೊದಲ ಗಂಡು ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೇ ನಾನು
ಅಂದ ಅಂದರೇನು ನೀನೆ ಅಂದೇ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ..
ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ ನಿನ್ನನ್ನಲ್ಲೆ
ನೋಡಿದಲ್ಲೆ ನೋಟದಲ್ಲೇ
ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ .
ಯಾರು ಪ್ರೀತಿಗೆ ಮೊದಲ ಬಾರಿಗೆ
ಸೋಲುವ ಕಲೆ ತಂದರು
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ
ಎತ್ತ ಹೋದ ಜಾರಿಕೊಂತ
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಎಂದೆ ಕೂಗಿ ಎಂದೆ
ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ ಆ ಆ ಆ
ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರು
ಕಣ್ಣು ಮೊದಲ ರೆಪ್ಪೆ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ