ಉಪವಾಸ ಈ ಕಣ್ಣಿಗೆ 
ನೀ ಚೂರು ಮರೆಯಾದರೆ 
ವನವಾಸ ಕೈಗಳಿಗೆ ಈಗ ಅರೆಘಳಿಗೆ 
ದೂರ ನೀ ನಿಂತರೆ 
ಪ್ರೀತಿ ಎಂದರೆ ಇಂಥ ತೊಂದರೆ 
ತೀರ ಸಹಜ ಬಿಡು 
ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು 
ಎಲ್ಲಿ ಹೋದರು ಎಲ್ಲೇ ಬಂದರು ನಿನ್ನದೇ ಅಮಲು 
ವಿರಾಮ ನೀಡುತಿಲ್ಲ ಯಾರಿಗ್ ಹೇಳುವುದು.. 
ಉಪವಾಸ ಈ ಕಣ್ಣಿಗೆ 
ನೀ ಚೂರು ಮರೆಯಾದರೆ 
ವನವಾಸ ಕೈಗಳಿಗೆ ಈಗ ಅರೆಘಳಿಗೆ 
ದೂರ ನೀ ನಿಂತರೆ 
ಸೇರು ನನ್ನ ತೋಳಿಗೆ 
ಚಿಂತೆ ತೂರಿ ಗಾಳಿಗೆ 
ನನ್ನ ನೆರಳಿಗೆ ಈಗ 
ನಿನ್ನ ನೆರಳು ಅಂತಿರಬೇಕು 
ಕೈಯ್ಯ ಬೆರಳಿಗೆ ಬೇಗ 
ನಿನ್ನ ಮುಂಗುರಲು ಸಿಗಬೇಕು 
ಪ್ರಣಯದ ಪಯಣವಿದು ನಿನ್ನಿಂದಲೇ ಆರಂಭ 
ನಿಂತಲ್ಲೆ ಕರಗುತ ನಾ ನೀರಾಗೋ ಸಂದರ್ಭ 
ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣ ಜಂಬ 
ಹೇಗೆ ಮೂಡಿತು ಹೇಗೆ ಮಾಗಿತು 
ಹುಚ್ಚು ಪ್ರೀತಿ ಇದು 
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು 
ಮಾತು ಮಾತಿಗೂ ನಿನ್ನ ಸೆಳೆತವು 
ಜೀವ ಹಿಂಡಿರಲು 
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು 
ಉಪವಾಸ ಈ ಕಣ್ಣಿಗೆ 
ನೀ ಚೂರು ಮರೆಯಾದರೆ 
ವನವಾಸ ಕೈಗಳಿಗೆ ಈಗ ಅರೆಘಳಿಗೆ 
ದೂರ ನೀ ನಿಂತರೆ 
ಒಂಟಿಯಲ್ಲ ನಾ ಎಂದಿಗೂ 
ಇನ್ನು ಮುಂದೆ ಈ ಬಾಳಲಿ 
ತುಂಬ ಮುದ್ದು ಮಾಡೋ 
ಒಂದು ಜೀವ ಈಗ ಸ್ವಂತ 
ತಲುಪಿ ಬಿಟ್ಟೆ ನಾನು 
ಗಾಳಿಲಿ ತೇಲೋ ಹಂತ 
ಇದು ಬಹು ಜನುಮಗಳ ಅನುಬಂಧವೇ ಸರಿ 
ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ 
ನವಿರಾದ ಪ್ರೀತಿ ಸಾಲನು ಹಣೆಯಲಿ ನೀನು ಬರಿ 
ನೀನು ಇಲ್ಲದೆ ನಾನು ಇರುವುದು ಯಾವ ಸುಖಕ್ಕಾಗಿ 
ಪ್ರೀತಿಸು ಎಂದು ಹೀಗೆ ಲೋಕ ಮರೆತೋಗಿ 
ಏನೆ ಆಗಲಿ ಏನೆ ಹೋಗಲಿ ನನ್ನ ಹೃದಯವಿದು 
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ 
ಉಪವಾಸ ಈ ಕಣ್ಣಿಗೆ 
ನೀ ಚೂರು ಮರೆಯಾದರೆ, 
ವನವಾಸ ಕೈಗಳಿಗೆ ಈಗ ಅರೆಘಳಿಗೆ 
ದೂರ ನೀ ನಿಂತರೆ