(M)ಕನಸೊ ಇದು ನನಸೊ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ
ಅಂತರಂಗದಾ ಆಹ್ವಾನವೆ
ಹೃದಯ ಮೀಟುವ ಶುಭ ಆರಂಭವು
ಪ್ರೀತಿ ಜನಿಸುವ ಆ ಗರ್ಭಕೆ
ಕಣ್ಣ ಭಾಷೆಯು ಎಂಥಾ ಆಹ್ಲಾದವು
(F)ಕನಸೊ ಇದು ನನಸೊ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾನಿಲ್ಲಲಿ ನೀನನ್ನಲಿ
ಅಂದುಕೊಂಡರೆ ಎಂಥ ರೋಮಾಂಚನ