menu-iconlogo
huatong
huatong
spbvanijayaram-haaduva-muraliya-cover-image

HAADUVA MURALIYA

Spb/Vani/Jayaramhuatong
nymedmaxhuatong
Lyrics
Recordings
ಸಂಗೀತ : ರಮೇಶ್ ನಾಯ್ಡು

ಗಾಯನ : ಡಾ.ಎಸ್.ಪಿ.ಬಿ ವಾಣಿಜಯರಾಮ್

ಸುಜಾತ ರವರ ಸಹಾಯದೊಂದಿಗೆ...

ಹಾ..ಡುವ ಮುರಳಿಯ

ಕುಣಿಯುವ ಗೆಜ್ಜೆಯ

ಎದೆಯಲಿ ಒಂದೇ ರಾ..ಗ

ಅದು ಆನಂದ ಭೈರವಿ ರಾ..ಗ

ಕರೆಯುವ ಕೊಳಲಿನ

ನಲಿಯುವ ಗೆಜ್ಜೆಯ

ಎದೆಯಲಿ ಪ್ರೇಮ ಪರಾಗ

ಹೊಳೆವ ಗೆಜ್ಜೆಯ ನಾದವ ಕೇಳಿ

ನಾಟ್ಯ ಸರಸ್ವತಿ ಕುಣಿದು

ಹೊಳೆವ ಗೆಜ್ಜೆಯ ನಾದವ ಕೇಳಿ

ನಾಟ್ಯ ಸರಸ್ವತಿ ಕುಣಿದು

ಮನಸು ಮುರಳಿಯ ಗಾನದಿ

ಸೇರಿ ಮಧುರಾ ನಗರಿಗೆ ತೇ...ಲಿ

ಯುಮುನಾ ನದಿಯಲಿ ಈಜುತಿದೆ

ಸ್ವರಗಳ ಅಲೆಯಲಿ ತೇ...ಲುತಿದೆ

ಕರೆಯುವ ಕೊಳಲಿನ ನಲಿಯುವ

ಗೆಜ್ಜೆಯ ಎದೆಯಲಿ ಪ್ರೇಮ ಪರಾಗ

ಅದು ಆನಂದ ಭೈರವಿ ರಾ...ಗ

ಹಾಡುವ ಮುರಳಿಯ ಕುಣಿಯುವ

ಗೆಜ್ಜೆಯ ಎದೆಯಲಿ ಒಂದೇ ರಾಗ

ಅದು ಆನಂದ ಭೈರವಿ ರಾ.....ಗ

ಹೆಜ್ಜೆಯ ತಾಳ ಗೆಜ್ಜೆಯ ಮೇಳ

ಜೀವವ ಕುಣಿಸಿರುವಾ.....ಗ

ಹೆಜ್ಜೆಯ ತಾಳ ಗೆಜ್ಜೆಯ ಮೇಳ

ಜೀವವ ಕುಣಿಸಿರುವಾಗ

ಕಣ್ಣೇ ಕವಿತೆಯ ಹಾಡಿ ಕುಣಿಸಿ

ಪ್ರೀತಿಯ ತುಂಬಿರುವಾ...ಗ

ಹರುಷದಿ ಹೃದಯಾ ತೇಲುತಿದೆ

ಬದುಕೇ ಹುಣ್ಣಿಮೆಯಾ...ಗುತಿದೆ

ಕರೆಯುವ ಕೊಳಲಿನ

ನಲಿಯುವ ಗೆಜ್ಜೆಯ

ಎದೆಯಲಿ ಪ್ರೇಮ ಪರಾಗ

ಅದು ಆನಂದ ಭೈರವಿ ರಾ...ಗ

ಹಾಡುವ ಮುರಳಿಯ ಕುಣಿಯುವ

ಗೆಜ್ಜೆಯ ಎದೆಯಲಿ ಒಂದೇ ರಾಗ

ಅದು ಆನಂದ ಭೈರವಿ ರಾಗ

More From Spb/Vani/Jayaram

See alllogo