"
Raktha Thilaka -
SHARE
LYRICS
Kaamana Billu Chenna
ಕಾಮನ ಬಿಲ್ಲು ಚೆನ್ನ
ಚಂದ್ರನ ಕಾಂತಿ ಚೆನ್ನ
ದಿನವೆಲ್ಲಾ ಹೂವಂತೆ
ನೀ ನಗುತಿರೆ ಬಾಳೇ ಚೆನ್ನ
ನನ್ನಾಣೆ ಓ ಹೆಣ್ಣೇ,
ನನ್ನಾಣೆ ಓ ಹೆಣ್ಣೇ,
ಕಾಮನ ಬಿಲ್ಲು ಚೆನ್ನ
ಚಂದ್ರನ ಕಾಂತಿ ಚೆನ್ನ
ದಿನವೆಲ್ಲಾ ಹೂವಂತೆ
ನೀ ನಗುತಿರೆ ಬಾಳೇ ಚೆನ್ನ
ನನ್ನಾಣೆ ಓ ಹೆಣ್ಣೇ,
ನನ್ನಾಣೆ ಓ ಹೆಣ್ಣೇ…..
ಅನುರಾಗವೇನೆಂದು ನನಗೀಗ ಅರಿವಾಯ್ತು
ಸಂಗಾತಿ ನಿನ್ನಿಂದ ನಾನೆಲ್ಲ ಕಲಿತಾಯ್ತು
ಏತಕೆ ಮೌನ… ಏನಿದು ಧ್ಯಾನ
ಏತಕೆ ಮೌನ… ಏನಿದು ಧ್ಯಾನ
ದೂರಕೆ ಹೋಗುವೆ ನಾಚುತ ನಿಲ್ಲುವೆ ಇಂದೇಕೆ
ನೀ ಹತ್ತಿರ ಬಾರದೆ ಕಣ್ಣಲಿ ಕೊಲ್ಲುವೆ ಹೀಗೇಕೆ
ಕಾಮನ ಬಿಲ್ಲು ಚೆನ್ನ
ಚಂದ್ರನ ಕಾಂತಿ ಚೆನ್ನ
ದಿನವೆಲ್ಲಾ ಹೂವಂತೆ
ನೀ ನಗುತಿರೆ ಬಾಳೇ ಚೆನ್ನ
ನನ್ನಾಣೆ ಓ ಹೆಣ್ಣೇ,
ನನ್ನಾಣೆ ಓ ಹೆಣ್ಣೇ…..
ಇರುಳಾದ ಬಾಳಲ್ಲಿ ಬೆಳಕೀಗ ಬಂದಾಯ್ತು
ಭಯವಿಲ್ಲ ಚಳಿಯಿಲ್ಲ ಹೊಸದಾರಿ ಕಂಡಾಯ್ತು
ಜೊತೆಯಲಿ ನೀನು…ಇದ್ದರೆ ನಾನು
ಜೊತೆಯಲಿ ನೀನು…ಇದ್ದರೆ ನಾನು
ಬೆಟ್ಟವ ಎತ್ತುವೆ ಪುಡಿಪುಡಿ ಮಾಡುವೆ ಹಿಟ್ಟಂತೆ
ಆ ಬಾನಿಗೆ ಹಾರುವೆ ಮೋಡದಿ ಓಡುವೆ ಮಿಂಚಂತೆ
ಕಾಮನ ಬಿಲ್ಲು ಚೆನ್ನ
ಚಂದ್ರನ ಕಾಂತಿ ಚೆನ್ನ
ದಿನವೆಲ್ಲಾ ಹೂವಂತೆ
ನೀ ನಗುತಿರೆ ಬಾಳೇ ಚೆನ್ನ
ನನ್ನಾಣೆ ಓ ಹೆಣ್ಣೇ,
ನನ್ನಾಣೆ ಓ ಹೆಣ್ಣೇ
ಕಾಮನ ಬಿಲ್ಲು ಚೆನ್ನ
ಚಂದ್ರನ ಕಾಂತಿ ಚೆನ್ನ
ದಿನವೆಲ್ಲಾ ಹೂವಂತೆ
ನೀ ನಗುತಿರೆ ಬಾಳೇ ಚೆನ್ನ
ನನ್ನಾಣೆ ಓ ಹೆಣ್ಣೇ
ನನ್ನಾಣೆ ಓ ಹೆಣ್ಣೇ….. "