ಗಂ: ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವ ಕಾಣುವೆ ನೀನು
ಹೆ: ಒಲವು ಕಂಡ
ಹೃದಯದಲ್ಲಿ
ಎಂದೂ ಇರುಳಿಲ್ಲ
ಚೆಲುವು ಧರೆಯೆಲ್ಲ
ಹೆ: ನೀರಲಿ ತೇಲುವ ಎಲೆಗಳ ನಡುವೆ
ಅರಳಿದ ಹೂವಿದು ಏ..ನು
ಗಂ: ರವಿಯನು ಕಂಡು ಅರಳುತ ನಗುವ
ತಾವರೆ ಹೂವಿದು ತಾನು
ಹೆ: ಈ ಹೂವು ಹೇಗಿದೆ
ಗಂ: ನಿನ್ನೀ ಮೊಗದ ಹಾಗಿದೆ
ಗಂ: ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ಹೆ: ಗಾಳಿಯು ಬೀಸಲು ತಲೆಯನು ತೂಗಿ
ಆಡುವ ಇದರ ಹೆಸರೇನು
ಗಂ: ಆಸರೆಗಾಗಿಯೇ ಮರವನು ಬಳಸಿ
ನಿಂತಿಹ ಬಳ್ಳಿಯು ತಾನು
ಹೆ: ಈ ಬಳ್ಳಿ ಹೇಗಿದೆ
ಗಂ: ನಿನ್ನೀ ನಡುವಿನ ಹಾಗಿದೆ
ಹೆ: ನನ್ನಕಣ್ಣಿನ ಜ್ಯೋತಿಯಾದರೆ ನೀನು
ಹೆ: ದೂರದಿ ಕೇಳುವ ಗಂಟೆಯು ಮೊಳಗುವ
ಮಂದಿರದಲ್ಲಿಹುದೇನು
ಗಂ: ಭಕುತರಿಗಾಗಿ ಗುಡಿಯಲಿ ನೆಲೆಸಿಹ
ದೇವರ ಮೂರುತಿ ತಾನು
ಹೆ: ಮೂರುತಿ ಹೇಗಿದೆ
ಗಂ: ನಿನ್ನೀ ಮನಸಿನ ಹಾಗಿದೆ
ಗಂ: ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವ ಕಾಣುವೆ ನೀನು
ಹೆ: ಒಲವು ಕಂಡ
ಹೃದಯದಲ್ಲಿ
ಎಂದೂ ಇರುಳಿಲ್ಲ
ಚೆಲುವು ಧರೆಯೆಲ್ಲ
ಗಂ: ಆಹಾಹಾಹಾ