ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ
ಬೆಟ್ಟವ ಬೆನ್ನಲಿ ಪೊತ್ತಿದ ರಾಮ ಕೂರ್ಮಾವತಾರಕ್ಕೆ
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನಸಲಹುದಕೆ
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ
ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರರ ಸಲಹುದಕ್ಕೆ
ವಾಹನ ಬಿಟ್ಟು ತುರಗವ ನೇರಿದ ಕಾಲ್ಕ್ಯಾವತಾರಕ್ಕೆ
ರಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ಶ್ಯಾಮಲ ವರ್ಣವ ತಾಳಿದ ರಾಮ ಸಮರ್ಥ್ಯನು ಜಗಕೆ
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ
ರಾಮನಾಮನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ..
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ.
ಶ್ರೀಮನ್ ನಾರಾಯಣ ಜಗಕೆ
ನಾರಾಯಣ ಹರಿ ನಾರಾಯಣ,
ನಾರಾಯಣ ಶ್ರೀಮನಾರಾಯಣ..
ನಾರಾಯಣ ಹರಿ ನಾರಾಯಣ,
ನಾರಾಯಣ ಶ್ರೀಮನಾರಾಯಣ..
ಹರಿ ನಾರಾಯಣ.. ಶ್ರೀಮನಾರಾಯಣ.