ಹೃದಯದ ಪಾಡು
ಹೃದಯವೇ ನೋಡು
ಸನಿಹಕ್ಕೆ ಬರಲು
ಅನುಮತಿ ನೀಡು
ಪರವಶ ಮನ
ಹೊಸಬೆಳಕಿನ ಕನಸು ಕಾಣುತ್ತಾ
ಇಡೀ ಬದುಕಿನ ಹಿಡಿ
ಒಲವಿಗೆ ಸೀಮಿತ
ಕ್ಷಣ ಪ್ರತಿಕ್ಷಣ
ತವಕದ ಗುಣ
ಎಂಥ ಅದ್ಭುತ
ಕಣಕಣದಲ್ಲೂ
ನಿನ್ನದೇ ಸೆಳೆತ
ಗುಂಡಿಗೆಯ ಗೂಡು
ನಿ ಇನುಕಿ ಒಮ್ಮೆ ನೋಡು
ಉಸಿರುಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನಿ ಇನುಕಿ ಒಮ್ಮೆ ನೋಡು
ಉಸಿರುಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಅರಲೋ ಮುಂಜಾನೆಯ
ಮೊದಲ ಕಿರಣ
ನಿನಗೆ ಸರಿದೂಗುವ ಹೋಲಿಕೆ
ಸಂಜೆ ಮುಸ್ಸಂಜೆಗೆ
ಬಣ್ಣದ ಸಾಲ
ಕೊಡುವ ಗುಣವಂತಿಕೆ ಏತಕ್ಕೆ
ಈಗ ಒಲವಿದು ಈಗೇಕೆ
ಕನಸಿನ ಹೊಲೆ ಗುಂಗಿನ ಮಳೆ
ಪ್ರಾಣ ಹಿಂಡಿದೆ
ನಿನ್ನ ನೆನೆಯುವ ಕೆಲಸವೇ ದಿನ ಸಾಗಿದೆ
ಕನವರಿಕೆಗೆ ಮನವರಿಕೆಯ ಮಾಡಲಾಗಿದೆ
ನಮಿಸುತ ಮನ ದಣಿದುಹೋಗಿದೆ
ಗುಂಡಿಗೆಯ ಗೂಡು
ನಿ ಇನುಕಿ ಒಮ್ಮೆ ನೋಡು
ಉಸಿರುಸಿರಿನಲ್ಲೂ
ನಿನ್ನ ಹೆಸರ ಜಪಿಸೋ ಹಾಡು
ಗುಂಡಿಗೆಯ ಗೂಡು
ನಿ ಇನುಕಿ ಒಮ್ಮೆ ನೋಡು
ಉಸಿರುಸಿರಿನಲ್ಲೂ ನಿನ್ನ ಹೆಸರ ಜಪಿಸೋ ಹಾಡು