menu-iconlogo
logo

Singara Siriye

logo
Lyrics
(M) ಹೇ...ಸಿಂಗಾರ ಸಿರಿಯೇ... ಅಂಗಾಲಿನಲೇ ಬಂಗಾರ ಅಗೆವ ಮಾಯೇ...

ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ

ಮಂದಾಹಾಸಾ... ಆಹಾ ನಲುಮೆಯಾ...

ಶ್ರಾವಣ ಮಾಸಾ....

ಮುದ್ದಾದ ಮಾಯಾಂಗಿ... ಮೌನದ ಸಾರಂಗಿ... ಮೋಹಕ ಮದರಂಗಿ...

ಕಣ್ಣ ಹಾಕಿದೆ ಮುಂಗುರುಳ ಸೋಕಿ

(M)ಮಾತಾಡುಬಾ ಮಂದಾರವೇ ಕಂಗೊಳಿಸಬೇಡಾ ಹೇಳದೇ

(F)ನಾನೇತಕೆ ನಿನಗ್ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ

(M) ಮನದಾಳದ ರಸ ಮಂಜರಿ ರಂಗೇರಿ ನಿನ್ನ ಕಾದಿದೆ

(F) ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿ ಆಗಿದೆ

(M) ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ

ಮುಳ್ಳು ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ

(F) ಕಣ್ಣಿಗೆ ಕಾಣೋ ಹೂವುಗಳೆಲ್ಲ ಏನೋ ಕೇಳುತಿವೆ

ನಿನ್ನಯ ನೆರಳ ಮೇಲೆಯೆ ನೂರು ಚಾಂದಿ ಹೇಳುತಿವೆ

(M) ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆವಾ ಮಾಯೇ

ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ

(M) ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ

(F) ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ

(M)ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ

(F) ನಾ ಕಾಣುವಾ ಕನಸಲ್ಲಿಯೇ ನೀನ್ಯಾಕೆ ಬೇಲಿ ಹಾರುವೆ

(M) ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು

ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ

(F) ಸುಂದರವಾದ ಸೋಜಿಗವೆಲ್ಲಾ ಕಣ್ಣಾ ಮುಂದೆ ಇದೆ

ಬಣ್ಣಿಸಬಂದಾ ರೂಪಕವೆಲ್ಲಾ ತಾನೇ ಸೋಲುತಿದೆ

(M) ಏ ಮಂದಾಹಾಸಾ ಆಹಾ ನಲುಮೆಯಾ ಶ್ರಾವಣ ಮಾಸಾ

Singara Siriye by Vijay Prakash/Ananya Bhat - Lyrics & Covers