ಅಪ್ಲೋಡ್: ರವಿ ಎಸ್ ಜೋಗ್ (25 07 2018) 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
ಹೊಸ ಭಾವಗಳು ಕುಣಿದಾಡುವುದು.. 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
ಹೊಸ ಭಾವಗಳು ಕುಣಿದಾಡುವುದು... 
ನಿನ್ನ ನೋಡಿದಾಗ...ಕಣ್ಣು ಕೂಡಿದಾಗ 
ಅನುರಾಗ ಮೂಡಿದಾಗ....ಆಆಆ.. 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
 ಎಂದೂ ಕಾಣೆ ನಂಬೂ ಜಾಣೆ ನಿನ್ನಾ ಸೇರಲು 
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು 
ಆ......ಆ......ಆ.....ಆಆಆ.....ಆ 
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು 
ಒಂಟಿ ಬಾಳು ಸಾಕು ಎಂದು 
ಮನಸೂ ಹೇಳಲು 
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ 
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ 
ಮಿಂಚಿನ ಬಳ್ಳಿಯು ಒಡಲಲಿ 
ಓಡುತ ನಾಚಿ ನೋಡಿದಾಗ.... 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
ಹೊಸ ಭಾವಗಳು ಕುಣಿದಾಡುವುದು... 
ನಿನ್ನ ನೋಡಿದಾಗ...ಕಣ್ಣು ಕೂಡಿದಾಗ 
ಅನುರಾಗ ಮೂಡಿದಾಗ....ಆಆಆ.. 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು 
ಸಂಜೆ ಬಂದು ರಂಗು ತಂದು ಮೇಲೆ ಎರಚಲು 
ಆ.......ಆ.......ಆ....... 
ತಂಪು ಗಾಳಿ ಬೀಸಿ ಬಳ್ಳಿ ಬಳುಕೀ ಆಡಲು 
ಹಾಗೇ ಹೀಗೆ ಆಡಿ ಹೂವು ಕಂಪೂ ಚೆಲ್ಲಲೂ 
ದುಂಬೀ ನೋಡಿದಾಗ ಸಂಗೀತ ಹಾಡಿದಾಗ 
ದುಂಬೀ ನೋಡಿದಾಗ ಸಂಗೀತ..ಹಾಡಿದಾಗ 
ಮನಸಿನ ಹಕ್ಕಿಯು ಕನಸನು 
ಕಾಣುತ ದೂರ ಹಾರಿದಾಗ..... 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
 ಹೊಸ ಭಾವಗಳು ಕುಣಿದಾಡುವುದು... 
ನಿನ್ನ ನೋಡಿದಾಗ...ಕಣ್ಣು ಕೂಡಿದಾಗ 
ಅನುರಾಗ ಮೂಡಿದಾಗ....ಆಆಆ.. 
ನನ್ನೆದೆ ವೀಣೆಯು ಮಿಡಿಯುವುದು 
ಹೊಸರಾಗದಲಿ ಹೊರಹೊಮ್ಮುವುದು 
ಆ....ಆಆ..ಆಆಆ...... 
F: ಆ....ಆಆ..ಆಆಆ...... 
 ಆ.ಆ.ಆ.... 
ರವಿ ಎಸ್ ಜೋಗ್