menu-iconlogo
huatong
huatong
arjun-saalutillave-cover-image

Saalutillave

Arjunhuatong
༄ᶦᶰᵈ᭄✿ᴀʀᴊᴜɴu200a࿐🇸u200a♦️🇸u200ahuatong
Letras
Grabaciones
#Arjun#

F-ಸಾಲುತಿಲ್ಲವೆ ಸಾಲುತಿಲ್ಲವೆ

ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಸಾಲುತಿಲ್ಲವೆ ಸಾಲುತಿಲ್ಲವೆ

ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಒಂದೆ ಸಮನೆ ನಿನ್ನ ನಾ ನೋಡುತಿದ್ದ ಮೇಲು

ತುಂಬ ಸಲಿಗೆಯಿಂದ ಬೆರೆತು ಹೋದ ಮೇಲು

ಪಕ್ಕದಲ್ಲೆ ಕುಳಿತುಕೊಂಡು

ನಿನ್ನ ಮೈಗೆ ಅಂಟಿಕೊಂಡು

ಉಸಿರು ಉಸಿರು ಬೆಸೆದ ಮೇಲೂ

ಸಾಲುತಿಲ್ಲವೆ ಸಾಲುತಿಲ್ಲವೆ

ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಸಾಲುತಿಲ್ಲವೆ ಸಾಲುತಿಲ್ಲವೆ

ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

M-ಮುಂಜಾನೆ ನನ್ನ ಪಾಲಿಗಂತು ಸಾಲೊಲ್ಲ

ಮುಸ್ಸಂಜೆ ತನಕ ಸನಿಹವಂತು ಸಾಲೊಲ್ಲ

ನನ್ನಾಸೆ ಅನಿಸಿಕೆ ನಾ ಹೇಳಲು

ನಿಘಂಟು ಪದಗಳೆ ಸಾಲೋದಿಲ್ಲ

ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ

ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ

ರುತುಗಳೆಲ್ಲ ತಿರುಗಿ ಹೋಗಿ

ಸಮಯ ಹಿಂದೆ ಸರಿದು ಹೋಗಿ

ಮೊದಲ ಭೇಟಿ ನಡೆದ ಮೇಲೂ

ಸಾಲುತಿಲ್ಲವೇ ಸಾಲುತಿಲ್ಲವೇ

ನಿನ್ನ ಹಾಗೆ ಅಮಲು ಬೇರೆ ಇಲ್ಲವೆ...

F-ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ

ಸಲ್ಲಾಪದಲ್ಲು ಇರುವ ಸುಖವು ಸಾಲೋಲ್ಲ

ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ

ನೂರಾರು ಜನ್ಮವು ಸಾಲೋದಿಲ್ಲ

ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ

ನನಸಾಗಿಸೋಕೆ ದೈವಗಳು ಸಾಕಾಗೊಲ್ಲ

ಏಳು ಸ್ವರವು ಮುಗಿದ ಮೇಲು

ಕಾಡುವಂತ ನನ್ನ ನಿನ್ನ

ಯುಗಳ ಗೀತೆ ಮುಗಿಯೋದಿಲ್ಲ

ಸಾಲುತಿಲ್ಲವೆ ಸಾಲುತಿಲ್ಲವೆ

M-ನಿನ್ನ ಹಾಗೆ ಅಮಲು ಬೇರೆ ಇಲ್ಲವೇ

F-ಶ್ವಾಸದಲ್ಲಿ ನೀನು ವಾಸವಿದ್ದ ಮೇಲೂ

ನನ್ನ ಹ್ರುದಯವನ್ನು ಹಾಯಗಿ ಕದ್ದ ಮೇಲೂ

M-ಎರಡು ಹ್ರುದಯ ಬೆರೆತ ಮೇಲೂ

ಹಾಡು ಮುಗಿದ ಹೋದ ಮೇಲೂ

ಮೌನ ತುಂಬಿ ಬಂದ ಮೇಲೂ

F-ಸಾಲುತಿಲ್ಲವೆ ಸಾಲುತಿಲ್ಲವೆ

ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ.....

Más De Arjun

Ver todologo