menu-iconlogo
logo

Chinnada Mallige

logo
Letras
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

ನಿನ್ನ ಒಲವು ಬೇಕೆಂದು ಬಳಿಗೆ

ಬಂದಾಗ ಛಲವು ನನ್ನಲ್ಲಿ ಏಕೆ

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

ನಿನ್ನ ಒಲವು ಬೇಕೆಂದು ಬಳಿಗೆ

ಬಂದಾಗ ಛಲವು ನನ್ನಲ್ಲಿ ಏಕೆ॥

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

lala laala laala laaa

laaa laala laala lala lala laa

lala laaa lala laaaa

ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ

ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ

ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡ ದಿನ್ನು

ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು

ನಿನಗಾಗಿಯೆ ಬಾಳುವೆ ಇನ್ನು ನಾನು

ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು

ನನ್ನ ನೆನಪು ಬಂದಾಗ ಮೊಗವಾ

ಕಂಡಾಗ ಒಲವು ಬೇಕೆಂದು ಬರುವೆ

ಹೊನ್ನಿನ ದುಂಬಿಯೆ ಇನ್ನು

ನಿನ್ನಾ ನಂಬೆನು ನಾನು॥೧॥

ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು

ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು

ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು

ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು

ಆನಂದದಾ, ಕಂಬನಿ, ತಂದೆ ನೀನು॥೨॥

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು

ನಿನ್ನ ಒಲವು ಬೇಕೆಂದು ಬಳಿಗೆ

ಬಂದಾಗ ಛಲವು ನನ್ನಲ್ಲಿ ಏಕೆ

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

Chinnada Mallige de Dr. Rajkumar - Letras y Covers