ಸರಿಗಮಗಳ ಈ ಸಾಗರದಲ್ಲಿ..
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ...
ಹೋ..ಘಮ ಘಮಗಳ ಈ ಗೋಪುರದಲ್ಲಿ..
ನಿತ್ಯ ವಸಂತ ಇವಳ ಈ ಲಜ್ಜೆ..
ಮೆಲ್ಲುಸಿರು ಏದುಸಿರು ಏನಿರಲಿ
ತನ್ನ ಕನಸಿನ ಬಾಗಿನ ನಗುತಿರಲಿ..
ಶ್ರೀ ಗಂಧದ ಗೊಂಬೆ ಏ ಏ...
ಮೆಲ್ಲ ಮೆಲ್ಲನೇ ಬರುತಾಳಮ್ಮ..
ಈ ಪ್ರೀತಿ ಅರಮನೆಗೆ ಏ..
ಬೆಳ್ಳಿ ಬೆಳಕು ತರುತಾಳಮ್ಮ..
ಮನೆ ತನಕ ಬಂದ ಹೆಣ್ಣು
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ..
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ...