ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಹೊಯಿಲಾಯಿತು
ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
== ರಂಗನಾಥ್ _ ====
ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು
ನೀನೆ ಈ ಬಾಳ ಭಾನು.
ನಿನ್ನ ಸವಿನೆನಪೆ ನಿನ್ನ ಸವಿನೆನಪೆ
ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ.
ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನೂ..ಉ.ಉ..ಉ
ಇನ್ನೂ ದಯೆ ಬಾರದೇನು.
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನಿನ್ನಲ್ಲಿ ಶರಣಾದೆ ಶಿವಶಂಕರ