(F) ಯಜಮಾನ ಯಜಮಾನ
ನಿನಗಿಂತಲೂ ಸಿರಿಯೇನಾ ...
ಓ..ಓ..ಓ..ಓ..ಓ..ಓ..ಓ..ಓ..
(F) ಯಜಮಾನ ಯಜಮಾನ
ನಿನಗಿಂತಲೂ ಸಿರಿಯೇನಾ ...
ಯಜಮಾನ ಯಜಮಾನ
ನಿನಗಿಂತಲೂ ಸಿರಿಯೇನಾ.
(M) ಓ ಹೊಂಬಾಳೆ ಚೆಲುವೆ...
ನಿನ್ನ ನಗುವಲ್ಲಿ ಸುರಿತಾವೆ ರತ್ನದ ಹರಳು..
ಓ ನನ್ನಾಸೆ ಒಲವೇ..
ನಿನ್ನ ಮಾತಲ್ಲಿ ಚೆಲ್ತಾವೆ ರತ್ನದ ಹರಳು..
(F) ಯಜಮಾನ ಯಜಮಾನ
ನಿನಗಿಂತಲೂ ಸಿರಿಯೇನಾ ...
(M) ನೀ ಬಯಸೊ ತೊಟ್ಟಿಲಿಗೆ..
ಬಿಳಿಗಿರಿಯ ಮರ ತಂದೆ..
ಆ ಚನ್ನಪಟ್ಟಣದ ಕರಕುಶಲಿಗರ ಕರೆದೆ..
(M) ಶ್ರೀವಾರ ಪಟ್ಟಣದ.. ಶಿಲ್ಪಿಗಳ ಕರೆತಂದೆ..
ಬೆಳ್ಳಿಯ ಗಂಟೆಗಳ ಅದರೊಳಗೆ ಜೋಡಿಸಿದೆ..
ಆ ಕುಂಚಗಳ ತಂದು ಇಲ್ಲಿ ಬಣ್ಣವಿರಿಸಿ..
ಆ ತಾರೆಗಳ ತಂದು ಇಲ್ಲಿ ಅಲಂಕರಿಸಿ..
ಏನ್ರೀ ಸರಿನಾ...ಆ ಸಿಂಹಾದ್ರಿ ಕುಲದಾ...
ಸೊಸೆ ನೀನು ನಿನಗೇನು ಕಮ್ಮಿ ಹೇಳೂ..
(F) ಯಜಮಾನ ಯಜಮಾನ
ನಿನಗಿಂತಲೂ ಸಿರಿಯೇನಾ ...
(F) ಮಾವಿನಕಾಯಿ ತೋರಣವು...
ಮಾವ ತಂದ ಉಡುಗೊರೆಯು..
ಬಯಕೆ ತೀರದೆ ಈಗ..
ಬಯಸಿದೇನೋ ಬೇರೆನೋ.
(F) ಹುಣಸೆಕಾಯಿ ಸಿಪ್ಪೆ ತೆಗೆದು..
ಅದಕ್ಕೆ ಸ್ವಲ್ಪ ಉಪ್ಪು ಬಸಿದು..
ಮಡಿಕೆಯಲ್ಲಿ ಸ್ವಲ್ಪ ನೆನೆಸಿ..
ತಿಂದರೆ ಬಯಕೆ ತೀರ್ತದ..
ಓ ಬಾವ ನಿನ್ನ ಕೈಯಿಂದ ಬಳೆ ತೊಡಿಸು..
ಓ ಅಕ್ಕ ನನ್ನ ಮುಡಿಗೀಗ ಹೂವ ಮುಡಿಸು..
ಏನ್ರೀ ಸರಿನಾ...ಈ ಸಿಂಹಾದ್ರಿ ಕುಲದಾ...
ಸೊಸೆ ನಾನು ನನಗೇನು ಕಮ್ಮಿ ಹೇಳೂ..
(M) ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೆ ನಾ..
ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೆ ನಾ..
ಓ ಹತ್ತೂರ ಸಿರಿಯೇ...
ನಿನ್ನ ಪ್ರೀತೀಲಿ ಸುರಿತಾವೆ ಮುತ್ತಿನ ಹರಳು..
ಓ ನನ್ನಾಸೆ ಒಲವೇ...
ನಿನ್ನೆದೆಯಿಂದ ಚಿಮ್ಮುತ್ತಿದೆ ರತ್ನದ ಹರಳು..