Music
M: ಚಂದ ಶ್ರೀಗಂಧ ಕಣೇ ಈ ಪ್ರೇಮ
ಹೃದಯಗಳ ಗಮ್ಮೆನಿಸೋ ಈ ಪ್ರೇಮ
F: ಮಲ್ಲೆ ಹೂಮಾಲೆ ಕಣೋ ಈ ಪ್ರೇಮಾ..
ಮನಸುಗಳ ಕಣ್ತೆರೆಸೂ ಈ ಪ್ರೇಮ
M : ಹಾಡಿನಲಿ..ಹೇಳಿದರೇ..
ಸಾಲದು ಮುದ್ದು ಪ್ರೇಮಾ..
F: ಚಂದ ಶ್ರೀಗಂಧ ಕಣೋ ಈ ಪ್ರೇಮಾ..
M: ಹೃದಯಗಳ ಗಮ್ಮೆನಿಸೋ ಈ ಪ್ರೇಮ
M: ರಾಗ ಯಾವುದೇ ಆದರೇನು ಪ್ರೀತಿಗೆ
ಎಲ್ಲಿ ಅಂದರಲ್ಲಿ ಹುಟ್ಟೊ ಚಾಳಿ ಇದರದು
F: ತಾಳ ಯಾವುದೇ ಆದರೇನು ಪ್ರೀತಿಗೆ,
ರಾಗ ತಾಳ ನೋಡದೇನೆ ಹುಟ್ಟಿಬಿಡುವುದು
M: ಹದಿ ಹರೆಯಕೆ ವರವೂ
ಈ ನಿರ್ಮಲ ಪ್ರೇಮ
F: ಬಿಸಿ ನುಡಿಗಳ ಸ್ವರವೂ
ಈ ಕೋಮಲ ಪ್ರೇಮ
M: ಪ್ರೇಮ..ಧರಣೀಗೆ..
ಲವಲವಿಕೆ ಹುಟ್ಟೋ ನಿತ್ಯ ಚೈತ್ರ
F: ಮಲ್ಲೆ ಹೂಮಾಲೆ ಕಣೋ ಈ ಪ್ರೇಮಾ
ಮನಸುಗಳ ಕಣ್ತೆರೆಸೋ ಈ..ಪ್ರೇಮ
M: ಅರರರ ಚಂದ ಶ್ರೀಗಂಧ ಕಣೇ ಈ ಪ್ರೇಮ
ಹೃದಯಗಳ ಗಮ್ಮೆನಿಸೋ ಈ..ಪ್ರೇಮ
F: ಜಾತಿ ಎನ್ನುವಾ ಬೇಲಿ ದಾಟಿ ಹೋಗುವಾ
ತುಂಟು ಭಂಡ ಧೈರ್ಯ ವುಂಟು
ನೋಡು ಪ್ರೇಮಕೆ...ಏ
M: ಜೀವ ಜೀವವಾ ತಂದು ಒಂದು ಮಾಡುವಾ
ನಾಡಿ ಮೀಟೋ ಕೆಲಸವೊಂದೆ
ಪ್ರೇಮಲೋಕೆ
F : ಪ್ರತಿ ಅಣುವಿಗು ಚಲನೆ
ನೀಡುತ್ತಿದೆ ಪ್ರೇಮ
M: ಪ್ರತಿ ಚಲನೆಗು ಪದವಾ
ಹಾಡುತ್ತಿದೆ.ಪ್ರೇಮಾ
F: ಪ್ರೇಮಾ..ಪಡೆದಾಗ
ಪ್ರತಿ ಇರುಳು ಕೂಡ ಹಗಲಿನಂತೆ
M: ಚಂದ ಶ್ರೀಗಂಧ ಕಣೇ ಈ ಪ್ರೇಮ
ಹೃದಯಗಳ ಗಮ್ಮೆನಿಸೋ ಈ ಪ್ರೇಮ
F: ಮಲ್ಲೆ ಹೂಮಾಲೆ ಕಣೋ ಈ ಪ್ರೇಮಾ
ಮನಸುಗಳ ಕಣ್ತೆರೆಸೋ ಈ..ಪ್ರೇಮ
M: ಹಾಡಿನಲಿ. ಹೇಳಿದರೇ
ಸಾಲದು ಮುದ್ದು ಪ್ರೇಮಾ..
F: ಮಲ್ಲೆ ಹೂಮಾಲೆ ಕಣೋ ಈ ಪ್ರೇಮಾ
ಮನಸುಗಳ ಕಣ್ತೆರೆಸೋ ಈ..ಪ್ರೇಮ
M: ಹೋಯ್, ಚಂದ ಶ್ರೀಗಂಧ ಕಣೇ ಈ ಪ್ರೇಮ
ಹೃದಯಗಳ ಗಮ್ಮೇನಿಸೋ ಈ..ಪ್ರೇಮ