ಚಿತ್ರ: ನ್ಯಾಯವೇ ದೇವರು
ಸಾಹಿತ್ಯ ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯಕರು: ಪಿ. ಬಿ. ಶ್ರೀನಿವಾಸ್
ಆಕಾಶವೇ ಬೀಳಲಿ ಮೇಲೆ..ಏಏಎ
ನಾ..ನೆಂದು ನಿನ್ನವನು..
ಭೂಮಿಯೇ ಬಾಯ್ ಬಿಡಲಿ ಇಲ್ಲೆ.ಏಏಎ
ನಾ..ನಿನ್ನ ಕೈ ಬಿಡೆನು..
ನೀನಿರುವುದೇ ನನ..ಗಾ..ಗಿ
ಈ ಜೀವ ನಿನಗಾ..ಗೀ..ಈ..ಇ
ಆಕಾಶವೇ ಬೀಳಲಿ ಮೇಲೆ..ಏಏಎ
ನಾ..ನೆಂದು ನಿನ್ನವನೂ...
ಹೆದರಿಕೆಯ ನೋಟವೇಕೆ,
ಒಡನಾಡಿ ನಾನಿರುವೇ..ಏಎ
ಹೊಸ ಬಾಳಿನ ಹಾ..ದಿಯಲ್ಲಿ..
ಜತೆಗೂ..ಡಿ ನಾ ಬರುವೇ..
ಕಲ್ಲಿರಲಿ ಮುಳ್ಳೇ ಇರಲಿ,
ನಾ ಮೊದಲು ಮುನ್ನಡೆವೇ..ಏಎ
ನೀನಡಿಯ ಇಡುವೆಡೆಯಲ್ಲಿ..
ಒಲವಿನ ಹೂ ಹಾಸುವೇ..
ಈ ಮಾತಿಗೆ ಮನವೇ ಸಾಕ್ಷಿ..
ಈ ಭಾಷೆಗೆ ದೇವರೆ ಸಾಕ್ಷಿ
ಇನ್ನಾದರೂ ನನ್ನಾ.. ನಂಬಿ
ನಗೆಯಾ ಚೆಲ್ಲು ಚೆಲುವೇ...
ಆಕಾಶವೇ ಬೀಳಲಿ ಮೇಲೆ..ಏಏಎ
ನಾ..ನೆಂದು ನಿನ್ನವನು..
ಭೂಮಿಯೇ ಬಾಯ್ ಬಿಡಲಿ ಇಲ್ಲೆ.ಏಏಎ
ನಾ..ನಿನ್ನ ಕೈ ಬಿಡೆನು..
ಹಸೆಮಣೆಯು ನಮಗೆ ಇಂದು,
ನಾವು ನಿಂತ ತಾ..ಣವು..ಉಉ
ತೂಗಾಡುವ ಹಸಿರೆಲೆಯೇ..ಏಎ
ಶುಭ ಕೋರುವ ತೋರಣವೂ..
ಹಕ್ಕಿಗಳ ಚಿಲಿಪಿಲಿ ಗಾನ,
ಮಂಗಳಕರ ನಾದವು..ಉಉ
ಈ ನದಿಯ ಕಲರವವೇ..ಏಎ
ಮಂತ್ರಗಳಾ ಘೋಷವೂ..
ಸಪ್ತಪದಿ ಈ ನಡೆಯಾಯ್ತು..
ಸಂಜೆರಂಗು ಆರತಿಯಾಯ್ತು..
ಇಂದೀಗ ಎರಡೂ.. ಜೀವ
ಬೆರೆತೂ ಸ್ವರ್ಗವಾಯ್ತು..ಉಉ
ಆಕಾಶವೇ ಬೀಳಲಿ ಮೇಲೆ..ಏಏಎ
ನಾ..ನೆಂದು ನಿನ್ನವನು..
ಭೂಮಿಯೇ ಬಾಯ್ ಬಿಡಲಿ ಇಲ್ಲೆ..ಏಏಎ
ನಾ..ನಿನ್ನ ಕೈ ಬಿಡೆನು..
ನೀನಿರುವುದೇ ನನ..ಗಾ..ಗಿ
ಈ ಜೀವ ನಿನಗಾ..ಗೀ..ಈ..ಇ
ಆಹಾಹಾ...ಹಾಹ ಹಾ..ಆ..ಆ
ಹಾ..ಹಾಹ ಹಾ..ಹಹಾ...
ಆಹಾಹಾ...ಹಾಹ ಹಾ..ಆ..ಆ
ಹಾ..ಹಾಹ ಹಾ..ಹಹಾ...