ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ..
ಓ ಓ ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೇಮದಿಂದ ನಿನ್ನ ಸೇರುವೆ.....
ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ
ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ
ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ
ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ