ಒಣಗಿದ ಹೂ ಬಳ್ಳಿ ಹಸಿರಾಯಿತು
ಸೊರಗಿದ ಮೈದುಂಬಿ ಸ್ವರ ಹಾಡಿತು
ಹೊಸ ಜೀವ ಬಂದಂತೆ ಹಾರಾಡಿತು
ಎದೆಯಲಿ ನೂರಾಸೆ ಉಸಿರಾಡಿತು
ಹೊಸತನ ಬೇಕೆಂದು ಹೋರಾಡಿತು
ಕನಸನ್ನು ಕಂಡಂತೆ ಕುಣಿದಾಡಿತು..
ಜೀವಕೆ ಹಿತವಾಯಿತು
ಅಮೃತ ಕುಡಿದಂತೆ ಸ್ವರ್ಗವ ಕಂಡಂತೆ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಗ....