menu-iconlogo
logo

Kalletigintha Ninna Kannetu

logo
Paroles
ಗಂಗಮ್ಮಾ................ಆ

ಚಿತ್ರ: ರಾಜ ನನ್ನ ರಾಜ

ಗಾಯಕರು: ಡಾ ರಾಜ್ ಕುಮಾರ್

ಮತ್ತು ಎಸ್.ಜಾನಕಿ ಅಮ್ಮ

ಸಂಗೀತ: ಜಿ.ಕೆ.ವೆಂಕಟೇಶ್

ಸಾಹಿತ್ಯ: ಚಿ.ಉದಯಶಂಕರ್

ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ

ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ

ನಡುಗಿದೆ ಗಡ ಗಡ ಗಂಗಮ್ಮಾ.......ಆ

ನನ್ನ ಎದೆಯಲಿ ಢವ ಢವ ಢವ ಢವ ಕೇಳಮ್ಮ

ನನ್ನ ಎದೆಯಲಿ

ಢವ ಢವ

ಢವ ಢವ

ಢವ ಢವ ಢವ ಢವ ಕೇಳಮ್ಮ

ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ

ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ

ಆಸೆಯೂ ಅತಿಯಾಗಿ ಚನ್ನಯ್ಯ ......ಆ

ನನ್ನ ಮಯ್ಯಲ್ಲಾ ಝಂ ಝಂ ಝಂ ಝಂ ನೋಡಯ್ಯ

ನನ್ನ ಮಯ್ಯಲ್ಲಾ

ಝಂ ಝಂ

ಆಹಾ

ಝಂ ಝಂ

ಝಂ ಝಂ ಝಂ ಝಂ ನೋಡಯ್ಯ

ಆ......

ಆ ಹಾ

ಆ...........................

ತನ ತನ

ಲಲ್ಲಾ ಲ ಲ ಲ ಲಾ

ಲಾ ಲಾ ಲಾ ಲಾ ಲಾ

ತುಂಬಿದ ಯವ್ವನ ಭಾರಕೆ ನಿನ್ನ

ಬಳುಕುವ ನಡುವು ಉಳುಕುವ ಮುನ್ನ

ಮೆಲ್ಲಗೆ ಹತ್ತಿರ ಬಾರಮ್ಮ ........ಆ

ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ

(ನಗು) ಹ್ಹಹ್ಹಹ್ಹ

ಗಗನದಿ ಸಿಡಿಲು ಕೇಳಿದ ನವಿಲು

ಗರಿಗಳ ಕೆದರಿ ಕುಣಿಯುವ ಹಾಗೆ

ಎದೆಯಲಿ ನಿನ್ನಾಸೆ ಚನ್ನಯ್ಯ .......ಆ

ನನ್ನ ಬಯಕೆಯ ತೀರಿಸು ಬಾರಯ್ಯ

ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ

ಆಸೆಯೂ ಅತಿಯಾಗಿ ಚನ್ನಯ್ಯ ......ಆ

ನನ್ನ ಮಯ್ಯಲ್ಲ ಝಂ ಝಂ ಝಂ ಝಂ ನೋಡಯ್ಯ

ನನ್ನ ಮಯ್ಯಲ್ಲಾ

ಝಂ ಝಂ

ಆಹಾ

ಝಂ ಝಂ

ಝಂ ಝಂ ಝಂ ಝಂ ನೋಡಯ್ಯ

ಮೋಡದ ಮರೆಯ ಚಂದಿರ ಚಂದ

ಸೆರಗಿನ ಮರೆಯ ಚೆಲುವೆ ಅಂದ

ಮೇತ್ತಾನೆ ಹೂ ರಾಶಿ ಗಂಗಮ್ಮ .......ಆ

ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ

ಹು ಹು ಹು (ನಗು)

ಹೂವಿನ ಹಾಗೆ ಮೈ ಅರಳುತಿದೆ

ಬಳಸಿದ ಉಡುಗೆ ಬಿಗಿಯಾಗುತಿದೆ

ತಾಳೆನು ಈ ಬೇಗೆ ಚನ್ನಯ್ಯ ........ಆ

ಇಂದೇ ಆಸರೆಯ ನೀಡು ಬಾರಯ್ಯ

ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ

ನಡುಗಿದೆ ಗಡ ಗಡ ಗಂಗಮ್ಮ .......ಆ

ನನ್ನ ಎದೆಯಲಿ ಢವ ಢವ ಢವ ಢವ ಕೇಳಮ್ಮ

ನನ್ನ ಎದೆಯಲಿ

ಢವ ಢವ

ಆಹಾ

ಢವ ಢವ

ಆಹಾ

ಢವ ಢವ ಢವ ಢವ ಕೇಳಮ್ಮ

ಗಂಗಮ್ಮಾ.....

ಚನ್ನಯ್ಯ.....

ಏನಮ್ಮ.....

ಬಾರಯ್ಯ.....

Kalletigintha Ninna Kannetu par S. Janaki/Rajkumar - Paroles et Couvertures