ಮೂಡಣದಿ ಮೂಡಿ ಬಾ
ಸಿಂಧೂರವೇ ಆಗಿ ಬಾ..
ಜೀವಧಾರೆ ಆಗಿ ಬಾ...
ಪ್ರೇಮ ಪುಷ್ಪ ಸೇರು ಬಾ..
ಬಾನಗಲ ತುಂಬಿ ಬಾ..
ಆಸೆಗಳ ತುಂಬು ಬಾ..
ಸಿಂಗಾರವೇ ತೇಲಿ ಬಾ
ಸಂತೋಷವಾ ನೀಡು ಬಾ..
ಪ್ರೇಮದಾಸೆ ನನ್ನ ನಿನ್ನ
ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ
ಸಂಧಿಸಿದೆ ನನ್ನಾಣೆ..
ದೇವರ ಗುಡಿಗೂ ಭಿನ್ನಗಳಿರಲು..
ಬಾಳಿನ ನಡೆಗು ಅಡ್ಡಿಗಳಿರಲು..
ಭೂಮಿಯಾಗಿ ನಾನಿರುವೆ
ಚಿಂತೆ ಬೇಡ ನನ್ನಾಣೆ...
ನಿನ್ನ ನೋವ ಮೇರುಗಿರಿಯ
ನಾ ಹೊರುವೆ ನಿನ್ನಾಣೆ...
ರಾತ್ರಿಯ ಬೆನ್ನಿಗೆ
ಬೆಳ್ಳನೆ ಹಗಲು...
ಚಿಂತೆಯ ಹಿಂದೆಯೇ
ಸಂತಸ ಇರಲು..
ಒಂದೆ ಒಂದು ಕಣ್ಣಾ ಬಿಂದು
ಜಾರಿದರೆ ನನ್ನಾಣೆ...
ಚಿಂತೆಯಲ್ಲಿ ನಿನ್ನ ಮನ
ದೂಡಿದರೆ ನನ್ನಾಣೇ...