ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ...ನಲ್ಲೆ ನಿನ್ನೀ
ತನುವ ಕಾಂತಿಯ ಕಂಡು ಆಸೆಯು ಬಂತಲ್ಲೇ
ಆಹಾ...ಹಾ...ಹಾ
ಮೇಘದ ಕರೆಯ ಸಿಡಿಲಿನ ಧ್ವನಿಯ ಕೇಳಿದ ನವಿಲಂತೆ..
ನಲ್ಲ ನಿನ್ನೀ ನುಡಿಯ ಕೇಳಲು
ಕುಣಿವ ಆಸೆಯು ಬಂತಲ್ಲ...
ನಡೆದರು ಚೆನ್ನ ನುಡಿದರು
ಚೆನ್ನ ಈ ಹೂ ನಗೆಯು...ಬಲು ಚೆನ್ನ
ಆ..ಆ..ಆ..ಆ..ಆ
ಬಳುಕುವ ಹೆಣ್ಣಾ . ಹೊನ್ನಿನ ಬಣ್ಣ..
ಕಾಡಿದೆ ನನ್ನೀ...ಮನಸನ್ನ
ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
ನೀನ್ಸೆ ನನ್ನ ಕನಸಲ್ಲು ನಾನಂದು ಕಂಡೆ
ಮೋಹಿಸಿ ಆ...ಶಿಸಿ ಬಯಸಿ ನಾ ಬಂದೆನು
ಮೇಘದ ಕರೆಯ
ಲ.ಲ.ಲಾ
ಸಿಡಿಲಿನ ಧ್ವನಿಯ
ಲ.ಲ.ಲಾ
ಕೇಳಿದ ನವಿಲಂತೆ...
ಲ.ಲ.ಲಾ
ನಲ್ಲ ನಿನ್ನೀ ನುಡಿಯ
ಲ.ಲ.ಲಾ
ಕೇಳಲು ಕುಣಿವ
ಲ.ಲ.ಲಾ
ಆಸೆಯು ಬಂತಲ್ಲ
ಸರಸವು ಚೆನ್ನ ವಿರಸವು ಚೆನ್ನ
ನೀ ಬಳಿ ಇರಲು...ಬಲು ಚೆನ್ನ
ಆ...ಆ.ಆ..ಆಆ...
ಒಲಿಯುತ ಬಂದು ಗೆಲುವನು
ತಂದು ಹೂವಾಗಿಸಿದೆ...ತನುವನ್ನ
ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
ಇಂದೆ ಎಂದು ನಾಕಾಣದಾನಂದ ತಂದೆ
ಪ್ರೇಯಸಿ ರೂ...ಪಸಿ ಒಲವಿನ ಊರ್ವಶಿ
ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂ...ತೆ
ನಲ್ಲ ನಿನ್ನೀ ನುಡಿಯ
ಕೇಳಲು ಕುಣಿವ ಆಸೆಯು ಬಂ...ತಲ್ಲ
ಅಹಾ ..ಹಾ ಹಾ ಹಾ.ಹಾ.ಹಾಹಾ
ಲಾಲ...ಲ...ಲಲಲಾ..ಲಾಲಲಲ...
ಅಹಾ ,,ಹಾ ಹಾ ಹಾ.ಹಾ.ಹಾಹಾ.
ಲಾಲ...ಲ...ಲಲಲಾ..ಲಾಲಲಲ...