ವಾಹ್ ವಾಹ್ ವಾಹ್ ವಾಹ್
ನಿಮ್ಕಡೆ ಸಾಂಬರ್ ಅಂದ್ರೆ,
ನಮ್ಕಡಿ ತಿಳಿಯೋದಿಲ್ಲ
ನಮ್ಕಡಿ ಡಾಂಬರ್ ಅಂದ್ರೆ,
ನಿಮ್ಕಡಿ ತಿಳಿಯೋದಿಲ್ಲ
ನಿಮ್ಕಡಿ ಶಿರಾ ಅಂದ್ರೆ, ತಲೆ ಅಂತ ತಿಳ್ಕೊಂತಿರಿ
ನಮ್ಕಡಿ ಶಿರಾ ಅಂದ್ರೆ, ಕೇಸರಿಬಾತ್ ಅನ್ಕೋತೀವಿ
ಎಂತದು, ಎಂತದು ಹಾಡೋದೆಂತ,
ಕೂಡೋದೆಂತ, ಕುಣುವುದೆಂತ
ಹೆಂಗಪ್ಪ, ಹೆಂಗಪ್ಪ, ಹಾಡೋದ್ಯ್ಹಾಂಗ,
ಕೂಡೋದ್ಯ್ಹಾಂಗ, ಕುಣಿಯೋದ್ಯ್ಹಾಂಗ
ಬೆಳಗಾವಿ ಆದರೇನು, ಬೆಂಗಳೂರು ಆದರೇನು,
ನಗಬೇಕು ನಾವು ಮೊದಲು ಮಾತಾಡಲು,
ಎದೆ ಭಾಷೆಯ ಅರಿವಾಗಲು
aaaaa...
ಹುಬ್ಬಳ್ಳಿಯಾದರೇನು, ಭದ್ರಾವತಿ ಆದರೇನು,
ಬೆರಿಬೇಕು ನಾವು ಮೊದಲು ನಲಿದಾಡಲು,
ನಾವೆಲ್ಲರೂ ಸರಿಹೋಗಲು.
aaaaa...
ಬೆಂಗ್ಳೂರಲ್ಲಿ ಬೊಂಡ ಅಂದ್ರೆ,
ಅಲೂಗಡ್ಡೆ ಉಂಡೆಯಂತೆ,
ಮಂಗ್ಳೂರಲ್ಲಿ ಬೊಂಡ ಅಂದ್ರೆ, ಎಳನೀರ ಕಾಯಿಯಂತೆ
ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡುತ್ತಾರೆ,
ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ.
ಮೈಸೂರಲಿ ಹೊಲ ಗದ್ದೆಗೆ ಭೂತಾಯಿ ಅಂತಾರೆ,
ಮಂಗ್ಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ನಿಮ್ಕಡೆ ಭಂಗಿ ಅಂದ್ರೆ, ಹೊಗೆಸೊಪ್ಪು
ಹಚ್ಚುವುದು, ಸೇದುವುದು.
ನಮ್ಕಡಿ ಭಂಗಿ ಅಂದ್ರೆ
ಚೊಕ್ಕ ಮಾಡೋ ಮಾನವರ ನಾಮವದು
ಸಾವಿರ ಹೂವ ಎದೆ ಹನಿ ಬೇಕು, ಜೇನಿನ ಗೂಡಾಗಲು,
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
aaaa...
ಗುಡಿಗೇರಿ ಆದರೇನು, ಮಡಿಕೇರಿ ಆದರೇನು,
ದುಡಿ ಬೇಕು ನಾವು ಮೊದಲು
ಧಣಿಯಾಗಲು, ಬಂಗಾರದ ಗಣಿಯಾಗಲು
aaaa...
ಯಾವ ಭಾಷೆ ದೊಡ್ಡದು, ಯಾವುದು ಚಿಕ್ಕದು
ಯಾವ ಭಾಷೆ ಕಲಿಯೋದು, ಯಾವುದ್ ಬಿಡೋದು
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು,
ನೂರಾರಲು ಗುರಿ ಇಲ್ಲದ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು
ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು
ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
ಕನ್ನಡನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ
ಭೂಪಟದಲ್ಲಿ ಮೆರೆಯಲು ನಮಗೆ
ಸಂಸ್ಕೃತಿಯ ಜೊತೆಯಿದೆ.
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ
ಲಲಾ, ಲಾ ಲಾಲ ಲಾಲ ಲಲಲಾಲ
ಲ ಲಾಲ ಲಾಲ ಲಾಲ ಲಲಾ ಲಾಲ ಲಾಲ
ಲಲಾ, ಲಾ ಲಾಲ ಲಾಲ ಲಲಲಾಲ