menu-iconlogo
huatong
huatong
avatar

Sayyare hoye sayya Galate aliyandru

shivarajkumarhuatong
ミ★ṧᾰḉℏṳ★彡huatong
Paroles
Enregistrements
ಹಾಡು: ಸಯ್ಯರೆ ಹೊಯ್ ಸಯ್ಯಾ

ಚಿತ್ರ: ಗಲಾಟೆ ಅಳಿಯಂದ್ರು

ಸಾಹಿತ್ಯ: ಎಸ್ ನಾರಾಯಣ್

ಸಂಗೀತ: ದೇವ್

ಹಾಡಿದವರು: ಎಸ್ ಪಿ ಬಿ, ಕೆ ಎಸ್ ಚಿತ್ರಾ

ಸಯ್ಯರೆ ಹೊಯ್ ಸಯ್ಯಾ....

ನನ್ ಪ್ರೀತಿಗೆ ನೀನ್ ಸಯ್ಯಾ......

ಸಯ್ಯರೆ ಹೊಯ್ ಸಯ್ಯಾ....

ನನ್ ಪ್ರೀತಿಗೆ ನೀನ್ ಸಯ್ಯಾ.....

ಮುದ್ದುಗಿಣಿ ಮುನಿಸು ಬಿಡು

ಮುದ್ದಿಸಲು ಮನಸು ಕೊಡು

ಹೊಯ್ ಮುದ್ದುಗಿಣಿ ಮುನಿಸು ಬಿಡು

ಮುದ್ದಿಸಲು ಮನಸು ಕೊಡು

ದುಂಡುದುಂಡು ಮಲ್ಲೆ ನನ್ನ ಮಾತು ಕೇಳಮ್ಮಾ..

ಕೆಂಡದಂಥ ಕೋಪ ಬಿಟ್ಟು ಪ್ರೀತಿ ಮಾಡಮ್ಮ..

ಸಯ್ಯರೆ ಹೊಯ್ ಸಯ್ಯಾ....

ನನ್ ಪ್ರೀತಿಗೆ ನೀನ್ ಸಯ್ಯಾ....

ಸಯ್ಯರೆ ಹೊಯ್ ಸಯ್ಯಾ......

************************

Uploaded by

Sachin DS

***********************

ನೀ ನೋಡೋ ನೋಟ

ಹೊಯ್ ನಾನಾಗಲೇನು

ಈ ನಗುವಿನೊಳಗೆ ಅಯ್ಯೊ ನಾ ಬೆರೆಯಲೇ..ನು

ಕೆಂದುಟಿಯ ಮೇಲೆ

ಜೇನಾಗಲೇನು

ಬಾಯ್ತೆರೆಯುವಾಗ

ಮಾತಾಗಲೇನು

ನಡುವಿನ ನಡಿಗೆಯಲಿ

ನನ್ನೆದೆಯ ಕೂರಿಸುವೆ

ಮೆಲ್ಲಗೆನೇ ನಡೆದು ಹೋಗಮ್ಮಾ..ಹೊಯ್

ಹುಬ್ಬುಗಳ ದಿಬ್ಬದ ಮೇಲೆ

ಕೂಸಿನಂತೆ ಕುಳಿತಿರುವೆ

ಕೋಪದಲ್ಲಿ ಬಾಗಬೇಡಮ್ಮಾ...

ಓ ಚಿನ್ನ ಚಿನ್ನ ನನ್ನ ಚಿನ್ನ

ನೀ ಒಮ್ಮೆ ತೆರೆಯೆ ಪ್ರೇಮದ ಕಣ್ಣ

ಓ ಚಿನ್ನ ಚಿನ್ನ ಮುದ್ದು ಚಿನ್ನ

ನೀನೊಮ್ಮೆ ನೋಡು ಪ್ರೀತಿಯ ಬಣ್ಣ ಅಹಹ

ಸಯ್ಯರೆ ಹೊಯ್ ಸಯ್ಯಾ....

ನನ್ ಪ್ರೀತಿಗೆ ನೀನ್ ಸಯ್ಯಾ....

ಸಯ್ಯರೆ ಹೊಯ್ ಸಯ್ಯಾ......

************************

Uploaded by

Sachin DS

***********************

ಇಂಟರ್ನೆಟ್ಟಿನಲ್ಲಿ ನನ್ನ ಪ್ರೀತಿ ಕಳಿಸಲೇನು

ಇಂಟರ್ವಿವ್ ಕರೆದು ನೀ ಪ್ರೀತಿ ಮಾಡ್ತಿ ಏನು

ಏ ಐಲು ಹುಡುಗಿ ಐ ಲವ್ ಯು ಅನ್ನೇ ಬೇಗ

ಈ ಸ್ಟೈಲು ಹುಡುಗ ಹಾಕ್ತಾನೆ ತುಟಿಗೆ ಬೀಗ

ಕನ್ನಡದ ಮಣ್ಣಿನಲ್ಲಿ

ಕನ್ನಡತಿ ಮಡಿಲಿನಲ್ಲಿ

ಹುಟ್ಟಿದಂಥ ಕೂಸು ನಾನಮ್ಮಾ ಹೋಯ್..

ಗಂಡೆದೆಯ ಬೀರನಿಗೆ ಹೊಯ್

ಮುದ್ದು ಮುದ್ದು ರಾಜನಿಗೆ

ಮುತ್ತಿನಂಥ ಮಗನು ನಾನಮ್ಮ..

ಓ ಚಿನ್ನ ಚಿನ್ನ ನನ್ನ ಚಿನ್ನ

ನೀ ಒಮ್ಮೆ ತೆರೆಯೆ ಪ್ರೇಮದ ಕಣ್ಣ

ಓ ಚಿನ್ನ ಚಿನ್ನ ಲವ್ಲಿ ಚಿನ್ನ

ನೀನೊಮ್ಮ ನೋಡೆ ಪ್ರೀತಿಯ ಬಣ್ಣ ಅಹ ಅಹ...

ಸಯ್ಯರೆ ಹೊಯ್ ಸಯ್ಯಾ....

ನನ್ ಪ್ರೀತಿಗೆ ನೀನ್ ಸಯ್ಯಾ....

ಮುದ್ದುಗಿಣಿ ಮುನಿಯಲಿಲ್ಲ

ಮುದ್ದಿಸಲು ಬರುವಳಲ್ಲ

ಮುದ್ದುಗಿಣಿ ಮುನಿಯಲಿಲ್ಲಾ.

ಮುದ್ದಿಸಲು ಬರುವಳಲ್ಲ

ದುಂಡುದುಂಡು ಮಲ್ಲೆ ಎಂದು ನಿನ್ನ ಕೊರಳಿಗೆ..

ನನ್ನ ಪ್ರೀತಿ ಎಂದೂ ನಿನಗೆ ಹೂವ ಮಾಲಿಕೆ..

ಧನ್ಯವಾದಗಳು..........

Davantage de shivarajkumar

Voir toutlogo

Vous Pourriez Aimer