ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲಬಾರದೇ
ಎರಡು ನೆರಳೀಗೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು ನಾ ನಿನ್ನ ಕೂಗೋದೇ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದೆ ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೆನು ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ
ಬಾಯಾರಿ ನಾ ನಿಂತ ಘಳಿಗೇಲಿ ಮಳೆಯೊಂದು ತಾನಾಗಿ ಬರಬಾರದೇ
ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ ನೀನೊಮ್ಮೆ ಸಿಗಬಾರದೇ
ನೀನಿಲ್ಲದಾಗ ನಾ ಕಂಡ ಕನಸು ಅತಿಯಾಗಿ ನೆನೆಪಾಗಿದೆ
ಬಿಡದೆ ಕಂಗಳಿಗೆ ಮುತ್ತು ನೀಡುವೆನು ನೀನಿಲ್ಲಿ ಇರಬಾರದೇ
ಎಲ್ಲಾ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ
ನಾ ತುಂಬಾ ನಗುವಾಗ ಈ ಕೆನ್ನೆ ಮೇಲೊಂದು ಚುಕ್ಕಿನ ಇಡಬಾರದೇ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೇ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು ಕಲಿಯೋದು ಮಜವಾಗಿದೆ
ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಲಬಾರದೇ
ಎರಡು ನೆರಳೀಗೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು ನಾನಿನ್ನ ಕೂಗೋದೇ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು ಬಯಸೋದೆ ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೆನು ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ