ಚಿತ್ರ:ನಗಬೇಕಮ್ಮ ನಗಬೇಕು
ಅಪ್ಲೋಡ್: ವಿನಾಯಕ ಶಾಸ್ತ್ರಿ
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀಹರಿಯನ್ನೂ ಕಾಣದೆ ಧರೆಗೇ
ಹುಡುಕುತಾ ಬಂದಳೋ....
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀಹರಿಯನ್ನು ಕಾಣದೆ ಧರೆಗೇ
ಹುಡುಕುತಾ ಬಂದಳೋ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ......
************"
ಮೂಲ ಗಾಯನ:SPB
ಕಣ್ಣ ನೋಟದಲಿ ತುಂಬಿ ಚಂದ್ರಿಕೆಯ
ಬೆಳಕು ಮಾಡುತಲಿ ಮನೆಯಾ..
ಅಧರ ಅರಳುತಿರೆ ನಗೆಯ ಮಲ್ಲಿಗೆಯ
ಚೆಲ್ಲಿ ಸೆಳೆಯುತಲಿ ಮನದಾ
ಕಣ್ಣ ನೋಟದಲಿ ತುಂಬಿ ಚಂದ್ರಿಕೆಯ
ಬೆಳಕು ಮಾಡುತಲಿ ಮನೆಯಾ..
ಅಧರ ಅರಳುತಿರೆ ನಗೆಯ ಮಲ್ಲಿಗೆಯ
ಚೆಲ್ಲಿ ಸೆಳೆಯುತಲಿ ಮನದಾ..
ಭಾಗ್ಯ ಕೊಡುವೆನೆಂದೂ
ಆನಂದಾ ತರುವೆನೆಂದೂ...
ಕನಿಕರದಿಂದ ಕರುಣೆಯ ತೋರಿ
ಕರೆಯದೆ ಬಂದಿಹಳೋ....
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ..
ಶ್ರೀಹರಿಯನ್ನು ಕಾಣದೆ ಧರೆಗೇ
ಹುಡುಕುತ ಬಂದಳೋ..
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ..
******************
ನನ್ನ ಹಾಡಿಗೇ ಹೊನ್ನ ಗೆಜ್ಜೆಯ
ತಾಳ ಹಾಕುವಾ ನೆಪದೀ
ತನ್ನ ರೂಪವ ಎದೆಗೆ ತುಂಬುವ
ಬಯಕೆ ಕೊಟ್ಟು ಮನದೀ...
ನನ್ನ ಹಾಡಿಗೇ ಹೊನ್ನ ಗೆಜ್ಜೆಯ
ತಾಳ ಹಾಕುವಾ ನೆಪದೀ...
ತನ್ನ ರೂಪವ ಎದೆಗೆ ತುಂಬುವ
ಬಯಕೆ ಕೊಟ್ಟು ಮನದೀ..
ಪ್ರೀತೀ ತುಂಬಿ ಕೊಂಡೂ
ನಾಚೀ ಬಳಿಗೆ ಬಂದೂ..
ಮೌನದಿ ನಿಂತ ಇವಳನು ಬಣ್ಣಿಸೆ
ದೊರಕದು ಮಾತುಗಳೂ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀಹರಿಯನ್ನು ಕಾಣದೆ ಧರೆಗೇ
ಹುಡುಕುತ ಬಂದಳೋ..
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ.......