??
ಕಣ್ಣ ನೀರಿದೂ…ಜಾರುತಾ ಇದೆ..
ನೀನು ಇಲ್ಲದೇ..ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯ
ನಾ.. ಪ್ರೀತಿ ಕೊನೆಯ ಇನಿಯಾ
ನೀನಿಲ್ಲದೆ…
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೇ ತುಂಬಾ ನೋವಾಗಿದೆ
MUSIC
ಪ್ರೀತಿ ಎಂದರೇ ವಿಷಾದ ಅಂದುಕೊಂಡರೆ
ನನ್ನ ಪ್ರೀತಿಯ ನಾ ಯಾರಿಗೆಂದು ಕೊಡಲಿ!
ಹೃದಯ ರಸ್ತೆಯ ಮಂಟಪ ಉರುಳಿ ಹೋಗಿದೆ
ಮತ್ತೆ ಕಟ್ಟಲು ನಾ ಯಾರ ಕರೆದು ತರಲಿ!
ನನ್ನ ಸೇರದ ನಿನ್ನ ಪ್ರೀತಿಗೆ
ತುಸು ಹಾರೈಕೆ ಹೆಚ್ಚೇನೆ ಇರಲಿ
ಮನಸು ಮುರಿದ ಪಯಣ
ಇದುವೇ ಕೊನೆಯ ಕವನಾ
ಒಲವ ಮೊದಲು ಮರಣಾ
ನೀನಿಲ್ಲದೇ
Music
ಅದು ಒಂದೇ ಒಂದು ಮನವಿ
ತುಟಿಯಾಚೆ ಬಂದಿದೆ
ನೀ ಬೇಕು ಅನ್ನೋ ಕೊರಗು
ಹಠಮಾಡಿ ಸೋತಿದೆ
ಮುತ್ತಿನಾ ಮಂದಿರ
ಬಿದ್ದಿದೇ ಬೇಗನೇ
ನಿನ್ನ ಗೆಲ್ಲಲೂ ಬಲವಿಲ್ಲದ
ನನ್ನ ಪ್ರೀತಿಗೆ ದುಃಖಾನೆ ಇರಲಿ
ಕಣ್ಣ ನೀರಿದೂ ಜಾರುತಾ ಇದೆ
ನೀನು ಇಲ್ಲದೆ ತುಂಬಾ ನೋವಾಗಿದೆ
ಮರೆತು ಬಿಡಲಿ ಹೃದಯ
ಭಾರ ಇಳಿಸಿ ಎದೆಯಾ
ನಾ ಪ್ರೀತಿ ಕೊನೆಯಾ ಇನಿಯಾ
ನೀನಿಲ್ಲದೇ…