ಆ, ಆ...., ಓ, ಹೊ,,
ಆ, ಆ.., ಓ, ಹೊ,,
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ
ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ
ಘಮ್ಮನೆಂದು ಅರಳಿದಳು ..
ಶ್ರೀಗಂಧ ಈ ಬೋಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೆ ಈ ತಾರೆಗೆ
ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರುಸು ಬಾಣವೋ
ಕೆನ್ನೆ ಮೇಲೆ ಸೇಬಿದೆ ಅಲ್ಲೇ ಗಿಣಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ
ದಾಳಿಂಬೆ ಕಾಲು ಬಾಯಲಿ
ಏನಿದು ಏನು ಮೋಜಿದು ಏನಿದೆನು ಮೋಜಿದು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ
ಘಮ್ಮನೆಂದು ಅರಳಿದಳು
ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ
ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು
ನೋಡಲಿವಳು ಹುಣ್ಣಿಮೆ ,ಬಿರಿಯಲಿವಳು ನೈದಿಲೆ
ಚಿಗುರು ಮಾವು ವಯಸಿದೆ ಅಲ್ಲೇ ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೆನು ಮೋಜಿದು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ
ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ
ಘಮ್ಮನೆಂದು ಅರಳಿದಳು ..