menu-iconlogo
logo

Madhyarathrili

logo
avatar
S. P. Balasubramanyam/S. Janakilogo
ಶಿವರಾಜ್💓SK💥ಕೆRಎಸ್P💕logo
Nyanyi di Aplikasi
Lirik
ಮಧ್ಯ ರಾತ್ರಿಲಿ ಹೈವೆ ರಸ್ತೇಲಿ

ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ

ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ

ಕಾಲು ದಾರೀಲಿ ನಿಂತ ನೀರಲ್ಲಿ ನಡೆಯುತಿದ್ದರೆ ನೋಡೋ ಆಸೆ ಬರ್ತಿದೆ.

ನಡೆಯುತಿದ್ದರೆ ನೋಡೋ ಆಸೆ ಬರ್ತಿದೆ

ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ

ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ

ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ

ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ

ರಾತ್ರಿಯಲ್ಲಿ ಜಾರಿ ಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ ಚಂದಿರನ ತುಂಡೆ

ಕವಿರಾಯ ಓ ಕಪಿರಾಯ

ಬಿಡಬೇಡ ಈ ನಿನ್ನ ಬಾಯ

ದೂರ ದೂರಿನಿಂದ ಬಂದೆ ದಾರಿ ತೋರಿಸು

ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು

ನಾ ಯಾರ ಮಗಳು ಗೊತ್ತಿದೆಯ

ನಮ್ಮೂರ ಬಳಗ ಕೇಳಿದೆಯ

ಕಾವೇರಿ ನದಿಯ ಕಂಗಳು ನಾ

ಸಹ್ಯಾದ್ರಿ ಸೀರಿಯಾ ಬಂಧುವು ನಾ

ಗಾಂಧಿಯಿದ್ದ ದೇಶ ನನ್ನದು

ಬುದ್ಧನಿದ್ದ ಭೂಮಿ ನನ್ನದು

ಬುದ್ಧ ಬಂದನೋ ಬುದ್ಧಿ ತಂದನೋ

ಆಸೆಯಿಂದಲೇ ದುಃಖ ಎಂದು ಹೋದನೋ

ನನ್ನ ದುಖವ ಕೇಳದೆ ಎಲ್ಲಿ ಹೋದನು?

ಗಾಂಧಿ ಬಂದನು ಶಾಂತಿ ತಂದನು

ಹಿಂಸೆಯಿಂದಲೇ ನಾಶ ಎಂದು ಹೋದನು

ನನ್ನ ಕಾಯದೆ ಬಾಪು ಎಲ್ಲಿ ಹೋದನು?

ನಿನ್ನ ನೋಡದೆ ನಮ್ಮಾಸೆ ತೀರದೆ

ನೀನು ಮುಟ್ಟದೆ ಈ ಹಿಂಸೆ ಹೋಗದೆ

ಸೊಗಸು ಬಂದಾಗ ನಾವ್ ನೋಡೋದೇ ತಪ್ಪ

ವಯಸು ಇದ್ದಾಗ ಲವ್ ಮಾಡೋದೇ ತಪ್ಪ

ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ

ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ

ಜವರಾಯ ಬಾರಯ್ಯ ಈಗ

ಯಮ ಪಾಶ ತಾರಯ್ಯ ಬೇಗ

ಬೀದಿಯಲ್ಲಿ ಜೀವ ಹಿಂದೋ ಪುಂಡರಾಸೆಗೆ

ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ

ಕಾಮಣ್ಣ ಮಕ್ಕಳ ಸ್ನೇಹಿತರು

ಹೂಬಾಣ ಬಿಡುವ ಕೀಚಕರು

ನಾ ಯಾರ ಮಗಳು ಗೊತ್ತಿದೆಯ ನಮ್ಮೂರ ಬಳಗ ಕೇಳಿಹೆಯ

ನಮ್ಮ ಆಸೆ ನಿನ್ನ ಮೇಲಿದೆ...

ನನ್ನ ಆಸೆ ಬೇರೆಯಾಗಿದೆ..

ಮಧ್ಯರಾತ್ರಿಲಿ ಹೈವೆ ರಸ್ತೇಲಿ

ಒಂಟಿ ಹುಡುಗಿ ನಿಂಗೇನು ಕೆಲಸ

ಮಧ್ಯರಾತ್ರೀಲಿ ನಿಮ್ಮ ಊರಲ್ಲಿ

ಮಾನ ರಕ್ಷೆಗೆ ನಿಂತಿನೋ ಅರಸ

ಇಲ್ಲಿ ಬರಲು ಕಾರಣ ಇದೆಯಾ ಹಾ..

ಕೇಸು ಕೇಳುವ ಸೌಜನ್ಯ ಇದೆಯಾ

ಶಿಸ್ತಿನಲ್ಲಿರು ಇದು ನನ್ನ ಏರಿಯ

ನಿನ್ನ ಏರಿಯ ಪೋಲಿ ಮಲೇರಿಯ

ಸ್ತ್ರೀಕುಲಕ್ಕೆ ರಕ್ಷಣೆಯಿಲ್ಲದ ನಿನ್ನ ಏರಿಯ

ಈ ಡಬ್ಬಲ್ ತಾರೆಯ ತೆಗೆದಿಡು ಮಾರಾಯ

ನಡು ರಾತ್ರಿ ಸ್ವಾತಂತ್ರ ಕೊಟ್ಟರೆ

ನೀವು ತಂದು ಬೀದೀಲಿ ಇಟ್ಟರೆ

ನಮ್ಮ ಊರು ಎಂದು ರಾಮರಾಜ್ಯವಾಗದು

ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು

ವೇದಾಂತ ನುಡಿವ ನಾಡಿನಲಿ

ಹೀಗೇಕೆ ನೀವು ಬಾಳುವಿರಿ

ಹೆಣ್ಣನ್ನು ಪೂಜಿಸೋ ಭೂಮಿಯಲಿ

ಈ ನೀತಿ ಸರಿಯೇ ಯೋಚಿಸಿರಿ

ಗಾಂಧಿಯಿದ್ದ ದೇಶ ನನ್ನದು

ಬುದ್ಧನಿದ್ದ ಭೂಮಿ ನನ್ನದು...

ಹಾರೋಯ್ತು ಆ ಪಾರಿವಾಳ

ಹಳಸೋಯ್ತು ಈ ರಸಗವಳ

ಕಾಗೆ ಗೂಬೆ ಹಾಗ್ ಕೂಗಿ ಬಾಯ್ ಒಣಗಿತೋ

ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ

ಯಾರ್ ಯಾರ ಚೆಲುವೆ ಎಲ್ಲಿಹಳೋ

ಯಾರ್ ಯಾರ ಋಣವು ಎಲ್ಲಿಹುದೋ

ಒಂದೊಂದು ಅಕ್ಕಿಯ ಕಾಳಿನಲು

ತಿನ್ನೋರ ಹೆಸರು ಕೆತ್ತಿಹುದೋ

ಪ್ರೀತಿಯಿಂದ ಹೋಗಿ ಎನ್ನಿರಿ

ಕೈಯಲ್ಲಿರೋ ತಂಗಳು ತಿನ್ನಿರಿ...