ನನ್ನಲ್ಲೇ ನೀನು ನಿನ್ನಲ್ಲೇ ನಾನು
ಸುಮಧುರ ಈ ಸಂಗಮ...aaa
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರ ಸಂಭ್ರಮ...aaa
ನನಗೆ ಇನ್ನು ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ....
ನನ್ನಲ್ಲೇ ನೀನು ನಿನ್ನಲ್ಲೇ ನಾನು
ಸುಮಧುರ ಈ ಸಂಗಮ...ತಾರಾರ..
ಮೋಡಿಯ ಮಾಡೋ ಜಾದೂಗಾರ..
ಸಲುಗೆ ತೋರೋ ಸಾಹುಕಾರ..
ಹೃದಯ ನೀನೇ ಕದ್ದ ಚೋರ..
ಮನಸು ಕಾಡೋ ಮಾಯಗಾರ..
ಹಿತಕರ.. ಸುಖಕರ..
ನಿನ್ನ ಜೊತೆ ಪ್ರಿಯಕರ..
ನೀನಿರೆ ಎಲ್ಲ ಸುಖ...
ಲವ್ ಯೂ ಚಿನ್ನ...
ಲವ್ ಯು ಕಂದ...
ನನಗಿಷ್ಟ ನೀ..
ಲವ್ ಯೂ ಚಿನ್ನ......
ನನ್ನಲ್ಲೇ ನೀನು ನಿನ್ನಲ್ಲೇ ನಾನು
ಸುಮಧುರ ಈ ಸಂಗಮ....ತಾರಾರ..
ಒಂದೇ ಒಂದು ನಿಮಿಷ
ನಾ ದೂರ ಇರೆನು ಒಲವೇ..
ಯಾಕಾದರೂ ಹೀಗೆ
ನೀ ನನ್ನನು ಸೆಳೆವೆ...
ಏನೇ ಹೇಳು ಕೊಡುವೇ..
ನಿನ್ನ ಪ್ರೀತಿ ಮುಂದೇ ಪದವೇ..
ಏನಾದರೂ ಸರಿಯೇ..
ನಿನಗೆಂದಿಗೂ ನಾನಿರುವೇ...
ಜೊತೆಯಿರಲು ನಿನ್ನ..
ಮುಡುಪಾಗಿದೆ ನನ್ನ..
ಈ ಜೀವನವಿನ್ನೂ ನಿನಗಾಗಿಯೇ....
ಲವ್ ಯು ಕಂದ..
ಲವ್ ಯು ಚಿನ್ನಾ...
ನನಗಿಷ್ಟ ನೀ...
ಲವ್ ಯು ಕಂದ...
ನನ್ನಲ್ಲೇ ನೀನು.. ನಿನ್ನಲ್ಲೇ ನಾನು..
ಸುಮಧುರ ಈ ಸಂಗಮ...
ಹ್ಮ್ ಹ್ಮ್ ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರ ಸಂಭ್ರಮ...
ನನಗೆ ಇನ್ನು ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮ...