ನಿನ್ನಂತೆ... ನಾನಾಗಲಾರೆ
ನಿನ್ನಂತೆ ನಾನಾಗಲಾರೆ
ಏನುಮಾಡಲಿ ಹನುಮ
ನಿನ್ನಂತೆ ನಾನಾಗಲಾರೆ
ಏನುಮಾಡಲಿ ಹನುಮ
ನಿನ್ನಂತಾಗದೆ, ನನ್ನವನಾಗನೆ,
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
#######music########
ಏಟುಕದ ಹಣ್ಣನೆ ನಾ ತರಲಾರೆ
ಮೇಲಕೆ ಎಗರಿ ಹನುಮ
ಏಟುಕದ ಹಣ್ಣನೆ ನಾ ತರಲಾರೆ
ಮೇಲಕೆ ಎಗರಿ ಹನುಮ
ಸೂರ್ಯನ ಹಿಡಿವ ಸಾಹಸಕಿಳಿದರೆ
ಆ ಕ್ಷಣ ನಾ ನಿರ್ನಾಮ
ಸೂರ್ಯನ ಹಿಡಿವ ಸಾಹಸಕಿಳಿದರೆ
ಆ ಕ್ಷಣ ನಾ ನಿರ್ನಾಮ
ಹಾದಿಯ ಹಳ್ಳವೆ ದಾಟಲಸಾಧ್ಯ
ಹೀಗಿರುವಾಗ ಹನುಮ
ಹಾದಿಯ ಹಳ್ಳವೆ ದಾಟಲಸಾಧ್ಯ
ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ
ಅಯ್ಯೋ ರಾಮರಾಮ
ಅಯ್ಯೋ ರಾಮರಾಮ...
ಅಯ್ಯೋ ರಾಮರಾಮ
ಅಯ್ಯೋ ರಾಮರಾಮ...
#########music###########
ಜಗಳ ಕಂಡರೆ ಓಡುವೆ ದೂರ
ಎದೆಯಲಿ ಡವ ಡವ ಹನುಮ
ಜಗಳ ಕಂಡರೆ ಓಡುವೆ ದೂರ
ಎದೆಯಲಿ ಡವ ಡವ ಹನುಮ
ರಕ್ಕಸರಾ ನಾ ಕನಸಲಿ ಕಂಡರು
ಬದುಕಿಗೆ ಪೂರ್ಣವಿರಾಮ
ರಕ್ಕಸರಾ ನಾ ಕನಸಲಿ ಕಂಡರು
ಬದುಕಿಗೆ ಪೂರ್ಣವಿರಾಮ
ಅಟ್ಟವ ಹತ್ತಲೆ ಶಕ್ತಿಯು ಇಲ್ಲ
ಅಂತ ದೇಹವು ಹನುಮಾ
ಅಟ್ಟವ ಹತ್ತಲೆ ಶಕ್ತಿಯು ಇಲ್ಲ
ಅಂತ ದೇಹವು ಹನುಮಾ
ಬೆಟ್ಟವನೆತ್ತುವೆನೆಂದರೆ ನನ್ನನು
ನಂಬುವನೆ ಶ್ರೀರಾಮ?
ನಂಬುವನೆ ಶ್ರೀರಾಮ?
ನಂಬುವನೆ ಶ್ರೀರಾಮ?
ನಂಬುವನೆ ಶ್ರೀರಾಮ?
##########music##########
ಕನಸಲಿ ಮನಸಲಿ ನಿನ್ನ ಉಸಿರಲಿ
ತುಂಬಿದೆ ರಾಮನನಾಮ
ಕನಸಲಿ ಮನಸಲಿ ನಿನ್ನ ಉಸಿರಲಿ
ತುಂಬಿದೆ ರಾಮನನಾಮ
ಚಂಚಲವಾದ ನನ್ನೀ ಮನದಲಿ
ನಿಲ್ಲುವರಾರೂ ಹನುಮ ?
ಚಂಚಲವಾದ ನನ್ನೀ ಮನದಲಿ
ನಿಲ್ಲುವರಾರೂ ಹನುಮ ?
ಭಕ್ತಿಯು ಇಲ್ಲ ಶಕ್ತಿಯು
ಇಲ್ಲ ಹುಟ್ಟಿದೆ ಯಾತಕೊ ಕಾಣೆ
ಭಕ್ತಿಯು ಇಲ್ಲ ಶಕ್ತಿಯು ಇಲ್ಲ
ಹುಟ್ಟಿದೆ ಯಾತಕೊ ಕಾಣೆ
ನೀ ಕೃಪೆಮಾಡದೆ ಹೋದರೆ ಹನುಮ
ನಿನ್ನ ರಾಮನ ಆಣೇ
ನಿನ್ನ ರಾಮನ ಆಣೇ.....
ನಿನ್ನ ರಾಮನ ಆಣೇ
ನಿನ್ನ ರಾಮನ ಆಣೇ.....
ನಿನ್ನಂತೆ ನಾನಾಗಲಾರೆ
ಏನುಮಾಡಲಿ ಹನುಮ
ನಿನ್ನಂತೆ ನಾನಾಗಲಾರೆ
ಏನುಮಾಡಲಿ ಹನುಮ
ನಿನ್ನಂತಾಗದೆ, ನನ್ನವನಾಗನೆ,
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
ನಿನ್ನ ಪ್ರಭು ಶ್ರೀ ರಾಮ
ಹನುಮಾ...
ಹನುಮಾ..
ಹನುಮಾ...
ಹನುಮಾ..