ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ ..
ತೀರ ಬಳಿಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ ..
ಒಂಟಿ ಇರುವಾಗ ಕುಂಟು ನೆಪ ತೋರಿ
ಬಂದ ಕನಸೆಲ್ಲ ನಿನ್ನದು ..
ನಾನು ಅನುರಾಗಿ ನೀನೆ ನನಗಾಗಿ
ಎನ್ನುವ ಭಾವನೆ ನನ್ನದು ..
ಕಣ್ಣಿನಲ್ಲೇನೆ ಹೊಮ್ಮಿದೆ ಕೋಮಲ ಕೋರಿಕೆ ..
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ ..
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ ..
ತೀರ ಬಳಿ.ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ ..
ಹೆದರುತ ಅರಳಿದೆ ನಾನಾ ಹಂಬಲ ..
ನಿನ್ನನೆ ತಲುಪಲು ..
ಮನಸಲಿ ಸವಿಗನಸಿನ ಸಾಲೆ ನಿಂತಿದೆ..
ಅಂಗಡಿ ತೆರೆಯಲು ..
ಎಲ್ಲೇ ನಾ ಹೋದರು ಗಮನ ಇಲ್ಲೇ ಇದೆ ..
ಸನಿಹವೇ ನೀ ಬೇಕೆನ್ನುವ ಹಟವು ಹೆಚ್ಚಾಗಿದೆ ..
ಈಗ ಚಂದ್ರನ ಒಪ್ಪಿಗೆ .. ಬೇಕೇನು ಸಲ್ಲಾಪಕೆ ..
ನೆನಪಿನ ಬೀದಿಯ ಎಲ್ಲ ಗೋ..ಡೆಗೂ ..
ನಿನ್ನದೇ ಮೊಗವಿದೆ ..
ಸಲಿಗೆಯ ತಕರಾರಿನ .. ಸಣ್ಣ ಕೊಪಕು .. ..
ಬೇರೆಯೇ ಸುಖವಿದೆ ..
ಇನ್ನು ಇಂಪಾಗಿದೆ ಕರೆವ ನಿನ್ನ ಸ್ವರ ..
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ ..
ಬೇಗ ಮೂಡಲಿ ಮತ್ಸರ .. ಈ ಭೂಮಿ ಆಕಾಶಕೆ ..
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ ..
ತೀರ ಬಳಿಬಂ.ದ ನೀನು ನನಗೊಂದು
ಸೋಜಿಗದಂತೆ ಕಾಣುವೆ ..