ಮುಕುಂದ ........ಆ ಆ
ಮುಕುಂದ
........
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
.ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯ
ಆಲಿಸು ಬಾರಯ್ಯ ಈ ಮೊರೆಯ
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
ಕರೆದಾಗ ಎದುರಿಗೆ ಬರುವೆ
ಬಯಸೋರಾ ಮನಸಲಿ ಇರುವೆ
ವರ ನೀಡೋ ಪುರುಷೋತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ
ಕೇಳುವೆ ನೀ ಮನೆ ಮನೆ ವರದಿ
ನನದೊಂದು ಇದೆ ಬಿನ್ನಹ.. ಕೃಷ್ಣ
ಬಾರೋ ಬಾರೋ ವೇಣು ನಾದ
ಸ್ವರಗಳ ಹರಿಸು
ಪ್ರಾಣ ದೇವಾ ಆಂಜನೇಯ ಬಯಕೆಯ ತಿಳಿಸು
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ ಕೃಷ್ಣ
ಹಗಲಿರುಳು ಹರಕೆಯ ಹೊರುವೆ
ನಿನಗಾಗಿ ತನುಮನ ತರುವೆ
ತಡವೇಕೆ ಯದುನಂದನ ಕೃಷ್ಣ
ದಣಿವೇನೋ ಕಣ ಕಣಗಳಿಗೆ
ಋಣಿ ನಾನು ನಿನ್ನ ಕಥೆ ಗಳಿಗೆ
ಶರಣೆನುವೆ ಲೋಕೋತ್ತಮ ಕೃಷ್ಣ
ನೀನೆ ರಾಮ ನೀನೆ ಶಾಮ
ಯುಗ ಯುಗ ಪುರುಷ
ಪ್ರಾಣ ದೇವಾ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮನ ಉಸಿರಲಿ ನೀನೇನೆ ನಿಜ ಪ್ರಾಣ ಕೃಷ್ಣ
ನಿನ ಪ್ರಾಣ ಹನುಮನೆ ಕೃಷ್ಣ...
ಶ್ರೀ ರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೆ ನೀನು ಶ್ರೀ..... ಕೃಷ್ಣ