menu-iconlogo
huatong
huatong
avatar

Idu Raama Mandira

Dr. Rajkumarhuatong
primoupy952huatong
Testi
Registrazioni
ಹೂ೦....ಉ೦ ಉ೦ ಉ೦ ಊ೦ ....

ಇದು ರಾಮ ಮಂದಿರ ..

ಹು೦.. ಆಮೇಲೆ

ನೀ.. ರಾಮಚಂದಿರ..

ಓ ಹ ಹ ಹ ಹೂ೦

ಇದು ರಾಮ ಮಂದಿರ ..

ನೀ.. ರಾಮಚಂದಿರ..

ಜೊತೆಯಾಗಿ ನೀನಿರಲು

ಬಾಳು ಸಹಜ ಸುಂದರ.. ಆ..

ಓ ಒ ಒ

ಇದು ರಾಮ ಮಂದಿರ

ನೀ ರಾಮಚಂದಿರ

ಸ್ವಾಮಿ ನಿನ್ನ ಕಂಗಳಲಿ

ಸ್ವಾಮಿ ನಿನ್ನ ಕಂಗಳಲಿ

ಚಂದ್ರೋದಯ ಕಾಣುವೇ

ಸ್ವಾಮಿ ನಿನ್ನ ನಗುವಲೇ

ಅರುಣೋದಯ ನೋಡುವೇ

ಸರಸದಲ್ಲಿ ಚತುರ ಚತುರ

ಸರಸದಲ್ಲಿ ಚತುರ ಚತುರ

ನಿನ್ನ ಸ್ನೇಹ ಅಮರ

ನಿನ್ನ ಬಾಳ ಕಮಲದಲೀ

ನಾನು ನಲಿವ ಭ್ರಮರ

ಇದು ರಾಮ ಮಂದಿರ

ನೀ ರಾಮಚಂದಿರ

ನನ್ನ ಸೀತೆ ಇರುವ ತಾಣ

ನನ್ನ ಸೀತೆ ಇರುವ ತಾಣ

ಕ್ಷೀರ ಸಾಗರದಂತೆ

ನನ್ನ ಸೀತೆ ಬೆರೆತಾ ಮನವು

ಹೊನ್ನ ಹೂವಿನಂತೆ

ನುಡಿವ ಮಾತು ಮಧುರ ಮಧುರ

ನುಡಿವ ಮಾತು ಮಧುರ ಮಧುರ

ನಿನ್ನ ಪ್ರೇಮ ಅಮರ

ನೀನು ಹೃದಯ ತುಂಬಿರಲು

ಬಾಳು ಪ್ರೇಮ ಮಂದಿರ

ಇದು ರಾಮ ಮಂದಿರ

ಆನಂದ ಸಾಗರ

ಇದು ರಾಮ ಮಂದಿರ

ಆನಂದ ಸಾಗರ

ಜೊತೆಯಾಗಿ ನೀನಿರಲು

ಬಾಳು ಸಹಜ ಸುಂದರ.. ಆ..

ಓ ಒ ಒ

ಇದು ರಾಮ ಮಂದಿರ

ನೀ ರಾಮಚಂದಿರ

ಹು೦ ಹು೦ ಹು೦ ಹು೦ ಹೂ೦..

ಹೂ೦.. ಹು೦ ಹು೦ ಹು೦ ಹೂ೦..

Altro da Dr. Rajkumar

Guarda Tuttologo