menu-iconlogo
huatong
huatong
avatar

Thande Kodiso Seere

Dr. Rajkumarhuatong
porontong1huatong
Testi
Registrazioni
ಒ ಒ ಒ ಒ ಒ ಒ ಒ

ಒ ಒ ಒ ಒ ಒ ಒ ಒ

ಒ ಒ ಒ ಒ ಒ ಒ ಒ ಒ ಓ

ಒ ಒ ಒ ಒ ಒ ಒ ಒ ಒ ಓ

ತಂದೆ ಕೊಡಿಸೋ ಸೀರೆ

ಮದುವೆ ಆಗೋ ವರೆಗೆ

ತಾಯಿ ಉಡಿಸೋ ಸೀರೆ

ತಾಯಿ ಆಗೋ ವರೆಗೆ

ಬಂಧು ಕೊಡಿಸೋ ಸೀರೆ

ಬಣ್ಣ ಹೋಗೋ ವರೆಗೆ

ಗಂಡ ಕೊಡಿಸೋ ಸೀರೆ

ಕುಂಕುಮ ಇರುವ ವರೆಗೆ

ಹೆಣ್ಣಿನ ಜನುಮ ಕಳೆವ ವರೆಗೆ

ಮಣ್ಣಿನ ಮಮತೆ ಇರುವ ವರೆಗೆ

ಭೂಮಿ ಎಂದೂ

ಜನ ಭಾರ ಎನುವುದಿಲ್ಲ

ತಾಯೀ ಎಂದೂ

ತನ್ನ ಮಗುವ ಬಿಡುವುದಿಲ್ಲ

ಇದ್ದು ಸತ್ತ ಹಾಗೆ..

ಮಗುವ ಬಿಟ್ಟ ತಾಯಿ..

ತಾಯಿಗಿಂತ ಇಲ್ಲಿ..

ದೊಡ್ಡದಿಲ್ಲ ಸ್ಥಾಯಿ..

ಸೀತಾ ಮಾತೆ ಸ್ಥಾನ

ಗಂಡನ ಅನುಸರಿಸಿದರೆ

ಗಂಗೆ ಗೌರಿ ಸ್ಥಾನ

ಕಥೆಯ ಅನುಕರಿಸಿದರೆ

ಗಂಡ ಹೆಂಡತಿ ನಂಟು

ಬ್ರಹ್ಮ ಹಾಕಿದ ಗಂಟು

ಹುಟ್ಟು ಸಾವಿನ ನಂಟು

ಹ್ರದಯ ಮಿಡಿವ ವರೆಗೆ

ಪ್ರೇಮದ ತುತ್ತ ತುದಿಯ ವರೆಗೆ

ಬಾಳಿನ ಗುಟ್ಟು ತಿಳಿವ ವರೆಗೆ

ತಾನಾನ ತಾನ ತಂದನಾನೋ ಓ

ಓ ಹೋ ಹೋ ಓ ಹೋ ಹೋ ಓ ಹೋ..

ಒಳ್ಳೆ ಮನಸ್ಸು..

ಇದ್ದರೇನೆ ಕಷ್ಟ ಬಂತೇ...

ಕರಗೋ ಹ್ರದಯಾ

ಇದ್ದರಂತೂ ಚಿಂತೆಯಂತೆ..

ಪ್ರೀತಿ ಹರಿವ ನೀರು

ಒಡೆದ ಮನಸ್ಸಿನಲ್ಲಿ..

ಬಾಳು ಕಣ್ಣನೀರು...

ಮಿಡಿದ ಹ್ರದಯದಲ್ಲಿ

ತಂದೆ ಕೊಡಿಸೋ ಸೀರೆ

ಮದುವೆ ಆಗೋ ವರೆಗೆ

ತಾಯಿ ಉಡಿಸೋ ಸೀರೆ

ತಾಯಿ ಆಗೋ ವರೆಗೆ

ಬಂಧು ಕೊಡಿಸೋ ಸೀರೆ

ಬಣ್ಣ ಹೋಗೋ ವರೆಗೆ

ಗಂಡ ಕೊಡಿಸೋ ಸೀರೆ

ಕುಂಕುಮ ಇರುವ ವರೆಗೆ

ಹೆಣ್ಣಿನ ಜನುಮ ಕಳೆವ ವರೆಗೆ

ಮಣ್ಣಿನ ಮಮತೆ ಇರುವ ವರೆಗೆ

Altro da Dr. Rajkumar

Guarda Tuttologo