ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ
ಬಂಧನವಾಗಿದೆ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ ಸಮಯದಲಿ
ಮಿಂಚುವ ಮಿನುಗುವ
ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ
ಸಾರಥಿ ಕಾಲುಂಗುರ
ಶುಭವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ
ಒಡವೆಯೋ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ರಂಗನಾಥ್
ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ
ಗೌರವ ಕಾಲುಂಗುರ
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ.
ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತೊರೆದು
ಗಂಡು ಹೆಣ್ಣಿಗೆ ನೀಡುವ ಆಣೆಯ
ಉಡುಗೊರೆ.
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ
ಶ್ರೀಮತಿಗೆ ಸುಂದರ
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ
ಬಂಧನವಾಗಿದೆ