---FULL CHARGE MAADI---
(MC Bijju)
(Raathee)
(DJ Lethal A)
ನುಗ್ಗೋದೆ ಗುಮ್ಮೋದೆ
ಊರ್ ಗೂಳಿ ಬಸವ
North South East West
ಎಲ್ಲಾ ಇಲ್ಲಿ ಕಬ್ಜ಼
ಪ್ರೀತಿಯಿಂದ ಗೆಲ್ಲಕ್ಕೇನ್ರಿ
ನಮ್ಗಿಲ್ಲ ಕಷ್ಟ
ಮಾತಿನ್ ತರಹ ನಮ್ಮ ನಡತೆ
ನೂರಕ್ ನೂರು ಸ್ಪಷ್ಟ
ಸೋತೋರ್ನ ಕೈ ಹಿಡಿದು
ಎತ್ತೋದ್ ನಮ್ ಸಂಸ್ಕೃತಿ
ನಮ್ಮ ನಡತೆ ನಂಬಿದ್ಹಂಗೆ
ನಡೆದಾಡೋ ಕನ್ನಡಿ
All Out ಆಗೋದ್ ನಿಶ್ಚಿತ
ಬಂದ್ರೆ ನಾವೀಗ Raid-ಗೆ
ಕಬಡ್ಡಿಗ್ ಮುನ್ನುಡಿ ಬರೆದ
ಗೂಳಿ ಬಂತು ಬೀದಿಗೆ
ನಮ್ಮ ರೀತಿಗೆ - ನೀತಿಗೆ
ಆಗಿರೋದ್ ನಾವ್ World Famous
ಪ್ರೀತಿಗೆ ಪೀಠಿಕೆ
ಹಾಕದಂತ ಕೂಲ್ Players
ಮರೀದೆ ಕೊನೆಗೆ ಕೊಡೋದೆ ಮಾಂಜ
ತೊಡೆಯ ಹೊಡೆದು ಹೇಳುವೆ "Aaja"
ಗೂಳಿಯ ಕತ್ತಿಗೆ ಕಟ್ಟುವ ಪಾಶ
ಹಿಡಿಯೋಕ್ ಬಂದವನಲ್ಲೇ ನಾಶ
ರಾಜರೇ ಇಲ್ಲಿರೋರೆಲ್ಲ
ಜಗಜಟ್ಟಿ ಮಲ್ಲರು
ಸೋಲೊಪ್ಪದ ಕಲಿಗಳು
ಬರಿ ಗೆಲುವನ್ನೇ ಬಲ್ಲರು
ಯಾರನ್ನೂ ದೂರ ತಳ್ಳರು
ಈ ಕನ್ನಡದ Body
ನುಗ್ಗುತ್ತಾ ಗೆಲ್ಲುತ್ತಾ ಇರ್ತೀವ್
Full Charge Maadi
ತೊಡೆ ತಟ್ಟಿ ನಿಂತ್ರೆ ನೋಡು ಕನ್ನಡಿಗ
ಎದೆ ಗಟ್ಟಿ ಇವನ್ದು ಇವ ಮಣ್ಣಿನ್ ಮಗ
ತೊಡೆ ತಟ್ಟಿ ನಿಂತ್ರೆ ನೋಡು ಕನ್ನಡಿಗ
ಇವ್ನ ಪಾದದ್ ಮೇಲೆ ಬೀಳುತ್ತೀಗ Full ಜಗ
---FULL CHARGE MAADI---
Bengaluru Bulls
ಗುದ್ದೋಕ್ Ready ಗೂಳಿಗಳು
Ready ಐತೆ ಮಗ ನಿಂಗ್ ಈಗ್
ಸೈಡಲ್ ಬೇಜಾನ್ ಸುಳಿಗಳು
ಮುಹೂರ್ತ ಬೇಕಿಲ್ಲ
ತೊಡೆ ತಟ್ಟಿ ಮಣ್ಣನ್ ತುಳಿಯಲು
Walkover ಚಿನ್ನ
ಒಂದೇ ದಾರಿ ಉಳಿಯಲು
ಹೇಳು ಎಲ್ಲಾದಕ್ಕೂ Ready
ಯಾರೇ ಬರ್ಲಿ ಎದೆ ಗಟ್ಟಿ
ಕೇಳು ಕಬಡ್ಡಿ ಕೋರ್ಟಿನೊಳಗೆ ಮೆಟ್ಟಿ
ಎಳೆದು ಮುಗಿಸಿದ್ ಮೇಲ್ ಎದ್ದೇಳು
ತಲೆಮೇಲ್ ತಟ್ಟಿ ಗೆಲುವನ್ನಟ್ಟಿ
ವಾಪಸ್ ಬರೋದೊಂದೆ ಸೇಡು
ಪ್ರತಿಯೊಬ್ರೂ ಹಠವಾದಿ
No Redemption Type ನಮ್ Raid-u
ಹಾ.. ಹಾ.. ಕನ್ನಡದ Bulls Rule
Battery Backup ಜಾಸ್ತಿ
Full Charge ಎಬ್ಸೋದ್ ಧೂಳ್ ಧೂಳ್
ಪ್ರೀತಿ ತೋರ್ಸಕ್ ಬಂದ ಎಲ್ಲರ್-ಗು
ಪೈಸ ವಸೂಲ್ ಕೂಲ್
Students of the Game ಆದ್ರೆ,
ಕಬಡ್ಡಿದಿದು School School
(Ready)
ತಡಿ ನೋಡಿ ಹೊಡಿ ಸೋಲೋರಗ್ಗಿ
ಗೆಲ್ಲೋ ಜೋಡಿ
ಸಮುದ್ರನ ಪಾರ್ ಮಾಡೊ ಗೋಲಿ
Raid ಅಂತ ಬಂದ್ರೆ ರೌಡಿ
ನೋಡುಗರ ಮೋಡಿ ಮಾಡಿ ಹೋಗೊ ತಂಡ
ಇಲ್ಲ ಶೋಕಿ ಒಂದೆ Option
ವಾಪಸ್ ತಿರುಗ್ದೆ ಓಡಿ ಓಡಿ
ತೊಡೆ ತಟ್ಟಿ ನಿಂತ್ರೆ ನೋಡು ಕನ್ನಡಿಗ
ಎದೆ ಗಟ್ಟಿ ಇವನ್ದು ಇವ ಮಣ್ಣಿನ್ ಮಗ
ತೊಡೆ ತಟ್ಟಿ ನಿಂತ್ರೆ ನೋಡು ಕನ್ನಡಿಗ
ಇವ್ನ ಪಾದದ್ ಮೇಲೆ ಬೀಳುತ್ತೀಗ Full ಜಗ
---FULL CHARGE MAADI---