ಎಂದೆಂದೂ ಬಾಳಲಿ ಹೀಗೆ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಎಂದೆಂದೂ ಬಾಳಲಿ ಹೀಗೆ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ನಿನಗೊಂದು ಸರಿ ಜೋಡಿ ಬೇಕೇನು ಕೇಳು
ಮಧುಚಂದ್ರ ಎಲ್ಲೆಂದು ಕಿವಿಯಲ್ಲಿ ಹೇಳು
ಬೇಕೇನು ವಜ್ರದ ಸರವು
ಬೇಕೇನು ಮುತ್ತಿನ ಸರವು
ನಿನ್ನಾಸೆ ನನ್ನಲಿ ಹೇಳು
ಏನೇನು ಬೇಕು ಕೇಳು
ನಾನೇನೂ ಹೇಳುವುದಿಲ್ಲ
ಬೇರೇನೂ ಬೇಡುವುದಿಲ್ಲ
ಈ ಪ್ರೀತಿಯೇ ಸಾಕಾಗಿದೆ
ಎಂದೆಂದೂ ಬಾಳಲಿ ಹೀಗೆ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಈ ನಮ್ಮ ಮನೆಯಲ್ಲಿ ಎಂದೆಂದೂ ಹೀಗೇ
ನಾವೆಲ್ಲ ಒಂದಾಗಿ ಇರುವಾಸೆ ನನಗೆ
ಒಲವಿಂದ ಹೀಗೆ ಸೇರಿ ಸಂಗೀತ ಹಾಡಿಕೊಂಡು
ಉಲ್ಲಾಸದಿಂದ ಕೂಡಿ ಸಂತೋಷ ಹಂಚಿಕೊಂಡು
ಬಾಳೆಂಬ ಬಾನಿನಲ್ಲಿ ಬಾನಾಡಿಯಂತೆ ನಾವು
ಹಾರಾಡುವ
ನಲಿದಾಡುವ
ಎಂದೆಂದೂ ಬಾಳಲಿ ಹೀಗೆ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದು
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ
ಹಾರೈಸುವೇ ನಾನೀದಿನ