ಜೊತೆಯಾ..ಗಿ ಬಹು ದೂರ ಹೋಗೊಣ..
ಪ್ರಯಾಣ ಎಲ್ಲೆಂ..ದು ನಾ ಹೇಳಲಾ..
ತುಸು ದೂರ ನಸು ನಕ್ಕು ಸಾಗೋಣ..
ಪ್ರೀತೀನಾ ಪತ್ತೆ ಮಾಡೊ ಹಂಬಲ!
ಇವನ್ಯಾರೊ ಬೈರಾಗಿ ?
ಬಂದಾನೊ ನನಗಾಗಿ !
ಬಿಡಿಗಾಸು ಬದಲಾಗಿ, ನನ ಮೇಲೆ ಮನಸಾಗಿ
ತನ್ನ ಜೋಳಿಗೆ, ಇಟ್ಟ ಎದುರಿಗೆ ಕಳ್ಳ ಕಿರುನಗೆ..
ಅತೀ.. ಅತೀ.. ಸಿಹಿ ಸುಳ್ಳುಗಳು.!
ಇದೇ ನಿಜ ಅನ್ನೊ ಪ್ರೇಮಿಗಳು....
ಓ.. ಓ. ತುಂಬಾ ತುಂಬಾ ಆತ್ಮೀಯ
ನಂಗೆ ತುಂಬಾ ಆತ್ಮೀಯ
ನಗುತಾ ಸನ್ನೇಲೆ ಕರೀತಾನೆ ಮಾರಾಯ..!