menu-iconlogo
logo

Kogile O Kogile

logo
Testi
ಕೋಗಿಲೆ ಓ ಕೋಗಿಲೆ

ಯಾವೂರ ಸುದ್ದಿಯ ಹೊತ್ತು ತಂದೆ

ಏ ಕೋಗಿಲೆ ಓ ಕೋಗಿಲೆ

ಏನೇನು ಆಸೆಯ ಹೊತ್ತು ತಂದೆ

ನಮ್ಮೂರ ಹಮ್ಮೀರ ನೀನು

ಹಾಡುವ ಹಾಡಿಗೆ ಮಾತು ತಂದೆ

ಮಾತಿಗು ರಾಗಕ್ಕು ನೀನು

ಹಾಕುವ ಗಂಟಲ್ಲಿ ಸೇರ ಬಂದೆ

ಹಾಡಯ್ಯ ನಮ್ಮೂರ ಹಮ್ಮೀರನೇ

ಕೋಗಿಲೆ ಓ ಕೋಗಿಲೆ

ಯಾವೂರ ಸುದ್ದಿಯ ಹೊತ್ತು ತಂದೆ

ಕೋಗಿಲೆ ಓ ಕೋಗಿಲೆ

ಏನೇನು ಆಸೆಯ ಹೊತ್ತು ತಂದೆ

ಹಸ್ತದ ಊರಲ್ಲಿ ಕೈ ಇಟ್ಟರೆ

ಮೈಯೂರಲ್ಲಿ ಹೊಯ್ ರೋಮಾಂಚವೆ

ಸೊಂಟದ ಹಳ್ಳಿಲಿ ತೋಳಿಟ್ಟರೆ

ಕಾಲೂರಲ್ಲಿ ಆಹಾ ರಂಗೋಲಿಯೇ

ಮಲ್ಲಿಗೆ ಊರಲ್ಲಿ ಮೂಗಿಟ್ಟರೆ

ಕಣ್ಣೂರಲ್ಲಿ ಆಹಾ ಆನಂದವೊ

ಕಣ್ಣಿನ ಪಟ್ಣಕ್ಕೆ ಕಣ್ಣಿಟ್ಟರೇ

ಹುಬ್ಬೂರಲ್ಲಿ ಅಯ್ಯೊ ನಾಚಿಕೆಯೊ

ಕೆನ್ನೆಯ ದಿಣ್ಣೇಲಿ ಬರಿ ಸಂಜೆನಾ..

ಬಾಯೂರ ಏರಿಲಿ ಬರಿ ಜೇನೆನಾ..

ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ

ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ

ಗುಂಡಿಗೆ ಸಂತೆಯ ಪೋರಿ

ಮಾರಲು ಇಲ್ಲಿಗೆ ಏನು ತಂದೆ

ನಮ್ಮೂರ ಹಮ್ಮೀರ ನೀನು

ಹಾಡುವ ಹಾಡಿಗೆ ಮುತ್ತು ತಂದೆ

ಹಾಡಲೆ ಹಾಡಲೆ ಕೋಗಿಲೆಯೆ

ಕೋಗಿಲೆ ಓ ಕೋಗಿಲೆ

ಯಾವೂರ ಸುದ್ದಿಯ ಹೊತ್ತು ತಂದೆ

ಕೋಗಿಲೆ ಓ ಕೋ..ಗಿಲೆ

ಏನೇನು ಆಸೆಯ ಹೊತ್ತು ತಂದೆ

ನಮ್ಮೂರ ಹಮ್ಮೀರ ನಿಮ್ಮೂರಿನ

ಸುದ್ದಿಯನ್ನ, ನಂಗೆ ತಾರ

ಮೀಸೆಯು ಮೆಚ್ಚುವ ಹೆಣ್ಣಿದ್ದರೆ

ನೋಡುತ್ತಾರ ಇಲ್ಲಿ ಮೆಚ್ಚುತ್ತಾರಾ

ಊರಿಗು ಕೇರಿಗು ನಂಜಾಗದ

ಹಣ್ಣಾದರೆ ತಿನ್ನುತ್ತಾರೆ

ಕನ್ನಡ ಮಣ್ಣಿನ ಹೆಣ್ಣಾದರೂ

ಪ್ರಾಣವನ್ನೆ ಅಹಾ ನೀಡುತ್ತಾರೆ

ಕಾವೇರಿ ನೀರಂತೆ ತಿಳಿ ಜನವೇನಾ

ಪ್ರೀತಿಗೆ ತವ್ರೂರು ಕರುನಾಡೇನಾ

ಮುಟ್ಟಿದರೆ ಗಂಧ ತಟ್ಟಿದರೆ ದಂತವೇ

ಮಂಡ್ಯದ ಗಂಡು ಒಲಿದರೆ ಸ್ವಂತವೇ

ನಮ್ಮೂರ ಹಮ್ಮೀರ ನೀನು

ಹಾಡುವ ಹಾಡಿಗೆ ನನ್ನೆ ತಂದೆ

ಮಾತಿಗು ರಾಗಕ್ಕು ನಾನು

ಹಾಕುವ ಗಂಟಲ್ಲಿ ನೀನು ಬಿದ್ದೆ

ಹಾಡೆಯ ನಮ್ಮೂರ ಹಮ್ಮೀರನೇ

ಕೋಗಿಲೆ ಓ ಕೋಗಿಲೆ

ಯಾವೂರ ಸುದ್ದಿಯ ಹೊತ್ತು ತಂದೆ

ಏ ಕೋಗಿಲೆ ಓ ಕೋಗಿಲೆ

ಏನೇನು ಆಸೆಯ ಹೊತ್ತು ತಂದೆ

ನಮ್ಮೂರ ಹಮ್ಮೀರ ನೀನು

ಹಾಡುವ ಹಾಡಿಗೆ ನನ್ನೆ ತಂದೆ

ಮಾತಿಗು ರಾಗಕ್ಕು ನಾನು

ಹಾಕುವ ಗಂಟಲ್ಲಿ ನೀನು ಬಿದ್ದೆ

ಲಾ ಲಾ ಲಾ ಲಾ ಲಾ ಲಾ

Kogile O Kogile di S.P. Balasubrahmanyam/Manjula Gururaj - Testi e Cover