_-Rhythm__Raghu-_
_-MUSIC-_
(F)ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
ಹೆಸರು ಬರೆದ ಹಾಳೆಯ
ಗೆಳೆಯ ನೀನೇ ಆಗಲಿ
ಹರಕೆ ಮಾಡಿ ಕೇಳುವೆ
ಉಸಿರು ಜೊತೆಗೆ ಹೋಗಲಿ
ಜೊತೆಗಿರು
ಪ್ರತಿದಿನ
ಮಗುವಿನ
ಮನಸಿನಾ..
ನಗುನಗುತಿರು
ಹೊಸ ಕನಸಿನ
ವರ ತಂದವನೇ
(M)ಏನು ಬೇಕು ಕೇಳು ನೀನು
ತಂದು ನಾನು
ಕೊಡ್ತೀನಿ ನಿಂಗೆಂದಿಗೂ
ರಾಜ ರಾಣಿ ನಾನು ನೀನು
ಯಾರ್ದು ದೃಷ್ಟಿ
ತಾಕಲ್ಲ ನಮಗೆಂದಿಗೂ
ಆಣೆ ಮಾಡಿ ಹೇಳುತ್ತೀನಿ
ನಿನ್ನ ಬಿಟ್ಟು
ಹೋಗಲ್ಲ ಎಂದೆಂದಿಗೂ
ಸಾಯೋವರ್ಗು ಹಿಂಗೆ ನಾನು
ನಿನ್ನ ಜೋಡಿ
ಇರ್ತೀನಿ ಎಂದೆಂದಿಗೂ
(F)ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
_-Rhythm__Raghu-_
_-MUSIC-_
(F)ಬೆಳಗಿನ..
ಸೂರ್ಯನೆ ತೋರಣ
ದಿನವಿಡಿ
ಒಲವಿನ ಹೂ ತೇರಿನ ಹೊಸ ದಿಬ್ಬಣ
ನನಗಿದು
ಇನಿಯನ ತೋಳಲಿ
ಮೊದಲನೇ ಅನುಭವ
ಅನುರಾಗದ ಹೊಸ ಊರಲೀ
ತಂಗಾಳಿಯು ನಮ್ಮ ಜೊತೆಗೆ
ದಾರಿಯು ತೋರಲಿ
ಹಕ್ಕಿಗಳು ಸಿಕ್ಕಿ ನಮಗೆ
ಶುಭವನು ಕೋರಲೀ
ನೀನೇನೆ ನಂಗೆಲ್ಲ
ಬೇರೇನು ಬೇಕಿಲ್ಲ
ದಿನಕಳೆಯಲಿ
ನಿನ್ನ ಜೊತೆಯಲಿ
ಹೊಸ ಜೋಗುಳ ಹಿತವಾಗಿದೆ
ಎದೆಯೂರೊಳಗೆ
(M)ನೀನೆ ನೀನೆ
ನೀನೇ ನೀನೇ ಎಲ್ಲಾ ನೀನೇ
ಬೇರೇನು ಬೇಡ ಕಣೇ
ಏಳು ಜನ್ಮ
ನೀನೇ ನಂಗೆ ಬೇಕು ಅಂತ
ದೇವ್ರನ್ನ ಕೇಳ್ತೀನ್ ಕಣೇ
ಬೀರೇ ದೇವ್ರು ಕಾಯುತ್ತಾನೆ
ನನ್ನ ನಿನ್ನ
ಹರಕೆನ ಕಟ್ತಿನ್ ಕಣೇ
ನಿನ್ನ ಖುಷಿ ನೋಡೋದಕ್ಕೆ
ಪೂರ್ತಿ ನಾನು
ನಿದ್ದೇನ ಬಿಡ್ತೀನ್ ಕಣೇ
ನನಗೆ ನೀನು ನಿನಗೆ ನಾನು
ನನಗೆ ಸಿಕ್ಕ ಒಲವು ನೀನು
ಕೈಯ ಬಿಡದೆ ಇರು ಕೊನೆವರೆಗೆ
ಜಗವು ನೀನು ಜೀವ ನೀನು
ದೈವ ಕೊಟ್ಟ ವರವು ನೀನು
ಬದುಕು ಪೂರ್ತಿ ದಿನ ಇರು ಜೊತೆಗೆ
_-Rhythm__Raghu-_
_-THANKYOU-_