menu-iconlogo
huatong
huatong
Testi
Registrazioni
ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ

ಮನಸೆ ಓ ಮನಸೆ ಎಂಥ ಮನಸೆ ಮನಸೆ ಒಳಮನಸೆ

ಮನಸೆ ನಿನ್ನಲಿ ಯಾವ ಮನಸಿದೆ, ಯಾವ ಮನಸಿಗೆ ನೀ ಮನಸು ಮಾಡಿದೆ

ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆ ...

ಮನಸು ಕೊಟ್ಟು ಮನಸನ್ನೇ ಮರೆತುಬಿಟ್ಟೆಯ

ಮನಸು ಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯ

ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆ

ಓ ಮನಸೆ ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ

ಓ ಮನಸೆ ಎರಡು ಹಾಲು ಮನಸಲೊಂದೇ ಮನಸು ಇದ್ದರೆ ಪ್ರೇಮ

ಮನಸಾಗೋ ಪ್ರತಿ ಮನಸಿಗೂ ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರೋಲ್ಲ

ಕೆಲ ಮನಸು ನಿಜ ಮನಸಿನಾಳದ ಮನಸ, ಹುಸಿ ಮನಸು ಅಂತ ಮನಸ್ಸನ್ನೆ ಮನಸೆನ್ನೋಲ್ಲ

ಮನಸೆ ಮನಸೆ ಹಸಿ ಹಸಿ ಮನಸೆ, ಮನಸು ಒಂದು ಮನಸಿರೋ ಮನಸಿನ ತನನನ

ತಿರುಗೋ ಮನಸಿಗೂ ಮರುಗೊ ಮನಸಿದೆ, ಬರದ ಮನಸಿಗೂ ಕರಗೋ ಮನಸಿದೆ

ಮೈ ಮನಸಲಿ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ

ಮುಮ್ಮಲ ಮನಸಿದ್ದರು ಮುಳುಗೇಳದು ಮನಸು

ಮನಸೆಲ್ಲೋ ಮನಸು ಮಾಡೋ ಮನಸಾ ಮನಸು

ಓ ಮನಸೆ ಮನಸು ಮನಸಲಿದ್ದರೇನೆ ಅಲ್ಲಿ ಮನಶ್ಶಾಂತಿ

ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸ್ಸಾಕ್ಷಿ

ಮನಸಾರೆ ಮನಸಿಟ್ಟು ಹಾಡುವ ಮನಸು, ಮನಸೂರೆ ಆಗೋದು ಮನಸಿಗೂ ಗೊತ್ತು

ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು, ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು

ಮನಸೇ ಮನಸೇ ಬಿಸಿ ಬಿಸಿ ಮನಸೇ, ಮನಸು ಒಂದು ಮನಸಿರೋ ಮನಸಿನ ಧಿರನನ

ತುಮುಲ ಮನಸಿಗೂ ಕೋಮಲ ಮನಸಿದೆ, ತೊದಲು ಮನಸಿಗೂ ಮೃದುಲ ಮನಸಿದೆ

ಮನಸಿಚ್ಚೆ ಮನಸ ಒಳಗೆ ಮನಸ್ವೇಚ್ಚೆ ಮನಸ ಹೊರಗೆ

ಮನಸ್ಪೂರ್ತಿ ಮನಸ ಪೂರ್ತಿ ಇರುವುದೇ ಮನಸು

ಮನಸೆಲ್ಲೋ ಮನಸು ಮಾಡೊ ಮನಸಾ ಮನಸು...

ಮನಸೆ ಓ ಮನಸೆ, ಮನಸೆ ಎಳೆ ಮನಸೆ, ಮನಸೆ ಒಳ ಮನಸೆ

-----------OOO-----------

Altro da Vijay Prakash/Shamitha Malnad

Guarda Tuttologo