menu-iconlogo
huatong
huatong
avatar

Bhagyada Balegara

B. R. Chayahuatong
only1keyhuatong
歌詞
レコーディング
(F) ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

(M) ನಿನ್ನ ತವರೂರ ನಾನೇನು ಬಲ್ಲೆನು..

ನಿನ್ನ ತವರೂರ ನಾನೇನು ಬಲ್ಲೆನು..

ಗೊತ್ತಿಲ್ಲ ಎನಗೇ ಗುರಿಯಿಲ್ಲ ಎಲೆಬಾಲೆ

ಗೊತ್ತಿಲ್ಲ ಎನಗೇ ಗುರಿಯಿಲ್ಲ ಎಲೆಬಾಲೆ

ತೋರಿಸು ಬಾ..ರೆ ತವರೂರಾ..

(F) ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

(F) ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು..

ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು..

ನಟ್ಟ ನಡುವೇಲಿ ನೀ ಹೋಗು ಬಳೆಗಾರ..

ನಟ್ಟ ನಡುವೇಲಿ ನೀ ಹೋಗು ಬಳೆಗಾರ..

ಅಲ್ಲಿಹುದೆನ್ನಾ ತವರೂರು...

(M) ಮುತ್ತೈದೆ ಎಲೆ ಹೆಣ್ಣೆ

ತೋರು ಬಾ ನಿನ್ ತವರೂರ..

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ..

(F) ಹಂಚಿನ ಮನೆ ಕಾಣೊ ಕಂಚಿನ ಕದ ಕಾಣೊ..

ಹಂಚಿನ ಮನೆ ಕಾಣೊ ಕಂಚಿನ ಕದ ಕಾಣೊ..

ಇಂಚಾಡೋವೆರೆಡು ಗಿಳಿ ಕಾಣೊ ಬಳೆಗಾರ..

ಇಂಚಾಡೋವೆರೆಡು ಗಿಳಿ ಕಾಣೊ ಬಳೆಗಾರ..

ಅಲ್ಲಿಹುದೆನ್ನಾ ತವರೂರು..

(M)ಮುತ್ತೈದೆ ಎಲೆ ಹೆಣ್ಣೆ

ತೋರು ಬಾ ನಿನ್ ತವರೂರ..

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ..

(F) ಆಲೆ ಆಡುತ್ತಾವೆ ಗಾಣ ತಿರುಗುತ್ತಾವೆ..

ಆಲೆ ಆಡುತ್ತಾವೆ ಗಾಣ ತಿರುಗುತ್ತಾವೆ..

ನವಿಲು ಸಾರಂಗ ನಲಿದಾವೆ ಬಳೆಗಾರ..

ನವಿಲು ಸಾರಂಗ ನಲಿದಾವೆ ಬಳೆಗಾರ..

ಅಲ್ಲಿಹುದೆನ್ನಾ ತವರೂರು..

(M)ಮುತ್ತೈದೆ ಎಲೆ ಹೆಣ್ಣೆ

ತೋರು ಬಾ ನಿನ್ ತವರೂರ..

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ..

(F)ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ..

ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ..

ನಟ್ಟ ನಡುವೇಲಿ ಪಗಡೆಯ ಆಡುತಾಳೆ..

ನಟ್ಟ ನಡುವೇಲಿ ಪಗಡೆಯ ಆಡುತ್ತಾಳೆ..

ಅವಳೇ ಕಣೋ ನನ್ನ ಹಡೆದವ್ವಾ..

(M) ಮುತ್ತೈದೆ ಎಲೆ ಹೆಣ್ಣೆ

ತೋರು ಬಾ ನಿನ್ ತವರೂರ..

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ..

(F) ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ..

ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ..

ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ..

ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ..

ಕೊಂಡ್ಹೋಗೊ ನನ್ನ.. ತವರೀಗೇ..

(F) ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೆ..

B. R. Chayaの他の作品

総て見るlogo