ಸಂಗೀತ: ಹರಿಕೃಷ್ಣ,
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ,
ಗಾಯನ: ಬಿ. ಜಯಶ್ರೀ
ಅಪ್ಲೋಡ್: ರವಿ ಎಸ್ ಜೋಗ್
ಸುಜಾತ ರವರ ಸಹಾಯದೊಂದಿಗೆ...
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂ.ತಾನೆ..ಪ್ರೀತೀ..ಲಿ ಗಿಲ್ತಾನೆ!...
ನಖರ ನಖರ ಶ್ಯಾನೆ ನಖರ
ನಂಗೂ ಇಷ್ಟಾ..ನೆ....
ನಾನು ಸೀರೆ ನೆರಿಗೆ, ಹಾಕುವ ಗಳಿಗೆ,
ಬರ್ತಾನೆ ಬಳಿಗೆ..
ಆಮೇಲೆ ಅಮ್ಮಮ್ಮಮ್ಮ!
ಯಾವ ಸೀಮೆ ಹುಡುಗ ತುಂಟಾಟವಾಡದೆ
ನಿದ್ದೆನೆ ಬರದೆ ಅಬ್ಬಬ್ಬಾಬ್ಬಾಬ್ಬಾ!....
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂ..ತಾನೆ
ಪ್ರೀ...ತೀಲಿ ಗಿಲ್ತಾನೆ!...
ಅಂಗಾಲಿಗೂ....ಅಂಗೈಇಗೂ...
ಗೋರಂಟಿಯ ಹಾ..ಕುವ...
ಯಾಮಾರಿಸೀ.. ಕೈಸೋಕಿಸಿ....
ಕಳ್ಳಾಟವ ಆಡುವ....
ಓ.ಓ..ನಿನ್ನ ಕಣ್ಣಲಿ..ಧೂಳು ಇದೆ....
ಎಂದು ನೆಪ ಹೇ..ಳುತಾ....
ನನ ಕಣ್ಣಲೀ....ಕಣ್ಣಿಟ್ಟನು
ತುಟಿ ಅಂಚನು ತಾಕುತಾ.....
ನಾನು ನೋವು ಅಂದರೆ..ಕಣ್ಣೀರು ಹಾಕುವ
ನೋವೆಲ್ಲ ನುಕುವ ಧೈರ್ಯಾನ ಹೇಳುವ..
ಮಾತು, ಮಾತು, ಸರಸ, ಒಂಚೂರು ವಿರಸ,
ಎಲ್ಲೋದ ಅರಸ, ಗೆಲ್ತಾನೆ ಮನಸಾ!.....
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂ...ತಾನೆ ಪ್ರೀತೀಲಿ ಗಿಲ್ತಾನೆ!...
ಮುಂಜಾನೆಯ.....ಮೊಗ್ಗೆಲವ....
ಸೂರ್ಯಾನೆ ಹೂ ಮಾ..ಡುವ...
ಈ ಹುಡುಗಿಯಾ ಹೆಣ್ಣಗಿಸೊ...
ಜಾದುಗಾರ ಇವ ಓ.. ಓ!
ಮುಸ್ಸಂಜೆಯ.. ದೀಪಾ ಇವ....
ಮನೆ ಮನಾ ಬೆಳಗುವ....
ಸದ್ದಿಲ್ಲದ ಗುಡುಗು ಇವ...
ನನ್ನೊಳಗೆ ಮಳೆಯಾಗುವ!....
ಪ್ರೀತಿಯೊಂದೆ ನಂಬಿಕೆ ಹೃದಯಾನೆ ಕಾಣಿಕೆ
ಅನ್ನೊದು ವಾಡಿಕೆ ಅದಕಿವನೆ ಹೋಲಿಕೆ?
ಏಳು, ಏಳು, ಜನುಮ, ಇವನಿಂದ ನೀ ಅಮ್ಮ
ಆಗುತ್ತಾ ಬಾಳಮ್ಮ, ಅಂದೋನು ಆ ಬ್ರಹ್ಮ!..
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣಾ ತಿಂ..ತಾನೆ....ಪ್ರೀತೀಲಿ ಗಿಲ್ತಾನೆ!