menu-iconlogo
logo

Yaava Kaviyu Bareyalara

logo
歌詞
ಯಾವ ಕವಿಯು ಬರೆಯಲಾರ,

ಯಾವ ಕವಿಯು ಬರೆಯಲಾರ,

ಒಲವಿನಿಂದ ಕಣ್ಣೋಟದಿಂದ ....

ಹೃದಯದಲ್ಲಿ ನೀ ಬರೆದ,

ಈ ಪ್ರೇಮ ಗೀತೆಯ,

ಯಾವ ಕವಿಯು ಬರೆಯಲಾರ,

ಬರೆಯಲಾರ

ನಿನ್ನ ಕವಿತೆ,ಎಂಥ ಕವಿತೆ,

ರಸಿಕರಾಡೋ ನುಡಿಗಳಂತೆ,

ನಿನ್ನ ಕವಿತೆ,ಎಂಥ ಕವಿತೆ,

ರಸಿಕರಾಡೋ ನುಡಿಗಳಂತೆ,

ಮಲ್ಲೆ ಹೂವು ಅರಳಿದಂತೆ,

ಚಂದ್ರಕಾಂತಿ ಚೆಲ್ಲಿದಂತೆ,

ಮಲ್ಲೆ ಹೂವು ಅರಳಿದಂತೆ,

ಚಂದ್ರಕಾಂತಿ ಚೆಲ್ಲಿದಂತೆ,

ಜೀವ ಜೀವ ಅರಿತು ಬೆರೆತು

ಸುಖವ ಕಾಣುವಂತೆ,

ಯಾವ ಕವಿಯು ಬರೆಯಲಾರ,

ಒಲವಿನಿಂದ ಕಣ್ಣೋಟದಿಂದ ....

ಹೃದಯದಲ್ಲಿ ನೀ ಬರೆದ,

ಈ ಪ್ರೇಮ ಗೀತೆಯ,

ಯಾವ ಕವಿಯು ಬರೆಯಲಾರ

ಪ್ರೇಮ ಸುಮವು,ಅರಳುವಂತೆ,

ಪ್ರಣಯ ಗಂಧ ಚೆಲ್ಲುವಂತೆ,

ಪ್ರೇಮ ಸುಮವು,ಅರಳುವಂತೆ,

ಪ್ರಣಯ ಗಂಧ ಚೆಲ್ಲುವಂತೆ,

ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,

ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,

ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ

ಯಾವ ಕವಿಯು ಬರೆಯಲಾರ,

ಒಲವಿನಿಂದ ಕಣ್ಣೋಟದಿಂದ....

ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,

ಯಾವ ಕವಿಯು ಬರೆಯಲಾರ,

ಬರೆಯಲಾರ,

Yaava Kaviyu Bareyalara by Dr. Rajkumar - 歌詞&カバー