menu-iconlogo
logo

Ninna Nanna Manavu

logo
avatar
Dr.RajKumarlogo
🎵DJ❣️JK🎵🎻101510🎻logo
アプリ内で歌う
歌詞
ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

ರಾಗವು ಒಂದೇ ಭಾವವು ಒಂದೇ,

ಜೀವ ಒಂದಾಯಿತು,ಬಾಳು ಹಗುರಾಯಿತು.

ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

ಏಕಾಂಗಿಯಾಗಿರಲು ಕೈ ಹಿಡಿದೇ,

ಜೊತೆಯಾದೆ ತಾಯಂತೆ ಬಳಿ ಬಂದೆ,

ಆದರಿಸಿ ಪ್ರೀತಿಸಿದೆ

ಬಾಳಲಿ ಸುಖ ನೀಡಿದೆ,ನನ್ನೀ ಬದುಕಿಗೆ ಶ್ರುತಿಯಾದೆ ,

ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

ಎಂದೂ ಜೊತೆಯಲಿ ಬರುವೆ,

ನಿನ್ನ ನೆರಳಿನ ಹಾಗೆ ಇರುವೆ,

ಕೊರಗದಿರು,ಮರುಗದಿರು,

ಹಾಯಾಗಿ ನೀನಿರು.

ಎಂದೂ ಜೊತೆಯಲಿ ಬರುವೆ,

ನಿನ್ನ ಉಸಿರಲಿ ಉಸಿರಾಗಿರುವೆ,

ನೋವುಗಳು ನನಗಿರಲಿ,ಆನಂದ ನಿನದಾಗಲಿ.

ನಗುವಿನ ಹೂಗಳ ಮೇಲೆ,

ನಡೆಯುವ ಬಾಗ್ಯ ನಿನಗಿರಲಿ,

ನೋಡುವ ಬಾಗ್ಯ ನನಗಿರಲಿ .

ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

ರಾಗವು ಒಂದೇ ಭಾವವು ಒಂದೇ,

ಜೀವ ಒಂದಾಯಿತು,ಬಾಳು ಹಗುರಾಯಿತು.

ನಿನ್ನ ನನ್ನ ಮನವು ಸೇರಿತು,

ನನ್ನ ನಿನ್ನ ಹೃದಯಾ ಹಾಡಿತು,

Ninna Nanna Manavu by Dr.RajKumar - 歌詞&カバー