menu-iconlogo
logo

Hennina janumake

logo
avatar
Kasturi Shankarlogo
☬꧁ಹೇಮಂತ್༒🔥KR☬ಎಸ್P🔥꧂☬logo
アプリ内で歌う
歌詞
ಹೆಣ್ಣಿನ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ

ಹೊನ್ನು ಕಟ್ಟುವರು ಉಡಿಯೊಳಗೆ

ಹೆಣ್ಣಿನ ಜನುಮಾಕೆ...

ಎನಗೆ ಯಾರಿಲ್ಲಂತ ಮನದಾಗ ಮರುಗಿದರ

ಪರನಾಡಲೊಬ್ಬ ಪ್ರತಿಸೂರ್ಯ..

ಪರನಾಡಲೊಬ್ಬ ಪ್ರತಿಸೂರ್ಯ ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ...

ಮನೆಯ ಹಿಂದಿಲ ಮಾವು ನೆನೆದಾರೆ ಘಮ್ಮೆಂದು

ನೆನೆದಂಗೆ ಬಂದ ನನ ಅಣ್ಣ

ನೆನೆದಂಗೆ ಬಂದ ನನ ಅಣ್ಣ ಬಾಳೆಯಾ

ಗೊನೆಯಾಂಗ ತೋಳ ತಿರುವೂತ

ಹೆಣ್ಣಿನ ಜನುಮಾಕೆ....

ಸರದಾರ ಬರುವಾಗ ಸುರಿದಾವು ಮಲ್ಲಿಗೆ

ದೊರೆ ನನ್ನ ತಮ್ಮ ಬರುವಾಗ...

ದೊರೆ ನನ್ನ ತಮ್ಮ ಬರುವಾಗ ಯಾಲಕ್ಕಿ

ಗೊನೆ ಬಾಗಿಲ ಹಾಲ ಸುರಿದಾವ..

ಅಣ್ಣ ಬರುತಾನಂತ ಅಂಗಳಕೆ ಕೈಕೊಟ್ಟು

ರನ್ನ ಬಚ್ಚಲಿಗೆ ಮಣೆ ಹಾಕಿ...

ರನ್ನ ಬಚ್ಚಲಿಗೆ ಮಣೆ ಹಾಕಿ ಕೇಳೇನು

ತಣ್ಣಗಿಹರಯ್ಯ ತವರವರು

ಹೆಣ್ಣಿನ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ

ಹೊನ್ನು ಕಟ್ಟುವರು ಉಡಿಯೊಳಗೆ

ಹೆಣ್ಣಿನ ಜನುಮಾಕೆ...