menu-iconlogo
logo

Kaanadanthe Maayavadanu

logo
歌詞
ಚಿತ್ರ: ಚಲಿಸುವ ಮೋಡಗಳು

ಗಾಯನ: ಪುನೀತ್ ರಾಜ್ ಕುಮಾರ್

ಸಂಗೀತ: ರಾಜನ್ ನಾಗೇಂದ್ರ

ಸಾಹಿತ್ಯ: ಚಿ.ಉದಯಶಂಕರ್

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ಕೊಡುವುದನ್ನು ಕೊಟ್ಟು

ಬಿಡುವುದನ್ನು ಬಿಟ್ಟು

ಕೊಡುವುದನ್ನು ಕೊಟ್ಟು

ಬಿಡುವುದನ್ನು ಬಿಟ್ಟು

ಕೈಯ ಕೊಟ್ಟು ಓಡಿಹೋದನೂ

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ಆಕಾಶ ಮೇಲೆ ಇಟ್ಟನೂ ನಮ್ಮ ಶಿವ

ಪಾತಾಳ ಕೆಳೆಗೆ ಬಿಟ್ಟನು

ಆಕಾಶ ಮೇಲೆ ಇಟ್ಟನೂ ನಮ್ಮ ಶಿವ

ಪಾತಾಳ ಕೆಳೆಗೆ ಬಿಟ್ಟನು

ನಡುವೆ ಈ ಭೂಮಿಯನ್ನು

ದೋಣಿ ಅಂತೆ ತೇಲಿಬಿಟ್ಟು

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ಹೆಣ್ಣಿಗೆಂದು ಅಂದ ಕೊಟ್ಟನೋ ನಮ್ಮ ಶಿವ

ಗಂಡಿನಲ್ಲಿ ಆಸೆ ಇಟ್ಟನೊ

ಹೆಣ್ಣಿಗೆಂದು ಅಂದ ಕೊಟ್ಟನೋ ನಮ್ಮ ಶಿವ

ಗಂಡಿನಲ್ಲಿ ಆಸೆ ಇಟ್ಟನೊ

ಹೆಣ್ಣು ಗಂಡು ಸೇರಿಕೊಂಡು

ಯುದ್ಧವನ್ನು ಮಾಡುವಾಗ

ಕಾಣದಂತೆ ಶಿವ

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ

ಕುಂಬಳಕಾಯಿ ಬಳ್ಳಿಲಿಟ್ಟನು

ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ

ಕುಂಬಳಕಾಯಿ ಬಳ್ಳಿಲಿಟ್ಟನು

ಹೂವು ಹಣ್ಣು ಕಾಯಿ ಕೊಟ್ಟು

ಜಗಳವಾಡೊ ಬುದ್ಧಿ ಕೊಟ್ಟು

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು

ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ

ಕಣ್ಣುಗಳಾ ಕಟ್ಟಿಬಿಟ್ಟನೊ

ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ

ಕಣ್ಣುಗಳಾ ಕಟ್ಟಿಬಿಟ್ಟನೊ

ನ್ಯಾಯನೀತಿಗಾಗಿ ತಲೆಯ

ಚೆಚ್ಚಿಕೊಳ್ಳಿರೆಂದು ಹೇಳಿ

ಕಾಣದಂತೆ ಶಿವ

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು